Mangalore: ಹಿಂದೂ ದೇವರ ಬಗ್ಗೆ ಅಶ್ಲೀಲ ‌ಕಮೆಂಟ್ - ಮೊಹಮ್ಮದ್ ಸಲ್ಮಾನ್ ಬಂಧನ

ಮಂಗಳೂರು: ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಪ್ರಕರಣದ ಆರೋಪಿಯನ್ನು  ಮಂಗಳೂರು ಪೊಲೀಸರು  ಬಂಧನ ಮಾಡಿದ್ದಾರೆ.

ನಗರದ ಕುಲಶೇಖರ ಬಿಕರ್ನಕಟ್ಟೆಯ ಮಸೀದಿ ಹಿಲ್ ರೋಡ್ ನ  ಮೊಹಮ್ಮದ್ ಸಲ್ಮಾನ್ (22) ಬಂಧಿತ ಆರೋಪಿ.

 ಈತ  ಇನ್ಸ್ಟಾ ಗ್ರಾಂ ನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ್ದನು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಮೊ.ನಂ: 163/2023 ಕಲಂ 67 ಐಟಿ ಕಾಯ್ದೆ ಮತ್ತು 153(ಎ),505(2) ಐಪಿಸಿ ರಂತೆ ದೂರು ದಾಖಲಾಗಿತ್ತು. 
 
 ಈ ಪ್ರಕರಣದಲ್ಲಿ ಆರೋಪಿಯಾದ ಮೊಹಮ್ಮದ್ ಸಲ್ಮಾನ್ ನನ್ನು ಬಂಧಿಸಿ ಮಂಗಳೂರಿನ  7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿನ ಆರೋಪಿ ಪತ್ತೆ ಕಾರ್ಯದಲ್ಲಿ, ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರು ಕುಲದೀಪ್ ಕುಮಾರ್ ಆರ್ ಜೈನ್ ರವರ ಮಾರ್ಗದರ್ಶನದಂತೆ, ಮಂಗಳೂರು ನಗರ ಸನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್  ಸತೀಶ್ ಎಂ ಪಿ ರವರ ನೇತೃತ್ವದಲ್ಲಿ, ಸೆನ್  ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.