Mangalore- ನೆರೆಮನೆಯ ಯುವತಿಯ ಸ್ನಾನದ ವಿಡಿಯೋ ಮಾಡಲು BATHROOM ನಲ್ಲಿ ಮೊಬೈಲ್ ಇಟ್ಟ ಯುವಕ




ಮಂಗಳೂರು: ನೆರೆಮನೆಯ ಯುವತಿಯ ಸ್ನಾನದ ವಿಡಿಯೋ ಚಿತ್ರಿಕರಿಸಲು ಬಾತ್ ರೂಂ ನಲ್ಲಿ ಯುವಕನೊಬ್ಬ ಮೊಬೈಲ್ ಇಟ್ಟಿದ್ದು, ಈ ಯುವಕನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿಯ ಪಕ್ಷಿಕೆರೆಯ ಸುಮಂತ್ ಪೂಜಾರಿ (22) ಬಂಧಿತ ಯುವಕ. ಈತ ತನ್ನ ನೆರೆಮನೆಯ ಬಾತ್ ರೂಂ ನಲ್ಲಿ ಮೊಬೈಲ್ ಬಚ್ಚಿಟ್ಟಿದ್ದನು. ಈ ಕೃತ್ಯ ಎಸಗಿದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಸುಮಂತ್ ಪೂಜಾರಿ  ವಿಡಿಯೋ ಗಾಗಿ ನೆರೆಮನೆಯ BATHROOM ನಲ್ಲಿ ಮೊಬೈಲ್ ಇಟ್ಟಿದ್ದನು. ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋ ಗಾಗಿ ಈತ ಮೊಬೈಲ್ ಅಡಗಿಸಿ ಇಟ್ಟಿದ್ದನು.ಆದರೆ ಯುವತಿಯ ಬದಲಾಗಿ ಯುವತಿಯ ಅಣ್ಣ ಬಾತ್ ರೂಂ ಗೆ ಸ್ನಾನಕ್ಕಾಗಿ ಬಂದಿದ್ದನು. 


ಬಾತ್ ರೂಂ ನಲ್ಲಿ ಮೊಬೈಲ್ ಇರುವುದನ್ನು ಯುವತಿಯ ಅಣ್ಣ ಗಮನಿಸಿದ್ದಾನೆ. ಈ ವೇಳೆ ಸುಮಂತ್ ಯುವತಿಯ ಅಣ್ಣನ ಕೈಗೆ ಸಿಕ್ಕಿಬಿದ್ದಿದ್ದಾನೆ. ಸುಮಂತ್ ವಿರುದ್ದ ಯುವತಿಯ ಅಣ್ಣ ಪ್ರಜ್ವಲ್
ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.  ಆರೋಪಿ ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ.