-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪೋರ್ನ್ ವೆಬ್ ಸೈಟ್ ಗೆ ಲೈವ್ ಸೆಕ್ಸ್ ಮಾಡುವಂತೆ ಪತಿ, ಮಾವನಿಂದ ಒತ್ತಾಯ: ತನಿಖೆಯಲ್ಲಿ ಭಯಾನಕ ರಹಸ್ಯ ಬಯಲು

ಪೋರ್ನ್ ವೆಬ್ ಸೈಟ್ ಗೆ ಲೈವ್ ಸೆಕ್ಸ್ ಮಾಡುವಂತೆ ಪತಿ, ಮಾವನಿಂದ ಒತ್ತಾಯ: ತನಿಖೆಯಲ್ಲಿ ಭಯಾನಕ ರಹಸ್ಯ ಬಯಲು

ರಾಜ್ ಕೋಟ್: ಪೋರ್ನ್​ ವೆಬ್​ಸೈಟ್​ ಗೆ ವಿಡಿಯೋ ಚಿತ್ರೀಕರಣ ಮಾಡಲು ಲೈವ್​ ಸೆಕ್ಸ್ ಮಾಡುವಂತೆ ಪತಿ ಹಾಗೂ ಮಾವ ಒತ್ತಾಯಿಸುತ್ತಿದ್ದಾರೆಂದು ಆರೋಪಿಸಿ 21ವರ್ಷದ ಯುವತಿಯೊಬ್ಬಳು ದೂರು ನೀಡಿರುವ ಘಟನೆ ಗುಜರಾತಿನ ರಾಜ್​ಕೋಟ್​ನಲ್ಲಿ ನಡೆದಿದೆ. ​

ಅಶ್ಲೀಲ ವೆಬ್​ಸೈಟ್​​ಗೆ ಪತಿಯೊಂದಿಗೆ ಲೈವ್​ ಸೆಕ್ಸ್​ ಮಾಡುವಂತೆ ಪತಿ ಹಾಗೂ ಮಾವ ಇಬ್ಬರೂ ಒತ್ತಾಯಿಸುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಎರಡು ವಾರಗಳಿಂದ 10 ಬಾರಿ ಒತ್ತಾಯ ಮಾಡಿದ್ದಾರೆ. ಅಲ್ಲದೆ, ತನ್ನ ಬೆತ್ತಲೆ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದಿರುವುದಾಗಿ ಸಂತ್ರಸ್ತೆ ಆರೋಪಿದ್ದಾಳೆ.

ಮಾವ ನಗರದ ಹೋಟೆಲ್‌ ಒಂದರಲ್ಲಿ ಷೇರು ಹೊಂದಿದ್ದರು. ಆದರೆ, ಈಗ ಸ್ವಲ್ಪ ಷೇರು ಮಾತ್ರ ಹೊಂದಿರುವ ಕಾರಣಕ್ಕೆ ಇಬ್ಬರು ಅಶ್ಲೀಲ ವೆಬ್‌ಸೈಟ್‌ಗಳಿಂದ ಹಣ ಗಳಿಸಲು ಯೋಜಿಸಿದ್ದಾರೆ ಎಂದು ಸಂತ್ರಸ್ತ ತಿಳಿಸಿದ್ದಾಳೆ. ಸಂತ್ರಸ್ತೆ ತನ್ನ ಪತಿಯನ್ನು ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಅವಳಿ ಮಕ್ಕಳಿದ್ದಾರೆ. ಇತ್ತೀಚೆಗೆ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಕ್ಯಾಮೆರಾದಲ್ಲಿ ಲೈವ್ ಸೆಕ್ಸ್ ಮಾಡುವುದನ್ನು ಕಲಿಸಲು ವಿದೇಶಿ ಮಹಿಳೆಯರನ್ನು ಹೋಟೆಲ್ ಕೋಣೆಗೆ ಕರೆತಂದಿರುವ ಮಾವ ತನ್ನ ಮುಂದೆಯೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೆಚ್ಚಾಗಿ ಲೈಂಗಿಕ ಆಟಿಕೆಗಳನ್ನು ಬಳಸಿದ್ದರಿಂದ ತನಗೆ ಸೋಂಕು ಸಹ ತಗುಲಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಕೆ ನೀಡಿರುವ ದೂರಿನನ್ವಯ ಸಂತ್ರಸ್ತೆಯ ಪತಿ ಹಾಗೂ ಮಾವನನ್ನು ರಾಜ್​ಕೋಟ್​ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಳಿಕ ಹೊಟೇಲ್​​ನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಬೆಚ್ಚಿ ಬೀಳಿಸುವ ಸಾಕ್ಷ್ಯಗಳು ಪತ್ತೆಯಾಗಿವೆ. ಹೋಟೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾಗಳಿದ್ದವು. ಇವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊಬೈಲ್ ಫೋನ್‌ಗಳು, ವೆಬ್‌ಕ್ಯಾಮ್‌ಗಳು, ಡಿವಿಆರ್ ಹಾರ್ಡ್ ಡಿಸ್ಕ್, ಸೆಕ್ಸ್ ಆಟಿಕೆಗಳು ಮತ್ತು ಲೈಂಗಿಕ ಸಮಯದಲ್ಲಿ ಧರಿಸಿದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಅಶ್ಲೀಲ ವೆಬ್‌ಸೈಟ್​ನಿಂದ ದೃಶ್ಯಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೈಬರ್ ಕ್ರೈಮ್ ಎಸಿಪಿ ವಿಶಾಲ್ ರಾಬರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲೈವ್ ಸೆಕ್ಸ್ ವೀಕ್ಷಿಸಲು ಬಳಕೆದಾರರು ಡಿಜಿಟಲ್ ಟೋಕನ್‌ಗಳನ್ನು ಪಾವತಿಸಬೇಕಾಗಿತ್ತು ಮತ್ತು ಇವುಗಳನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಆದಾಯವನ್ನು ಪಡೆಯಲಾಗುತ್ತಿತ್ತು ಎಂಬುದು ಆರೋಪಿಗಳ ಹೇಳಿಕೆಯಿಂದ ಬಯಲಾಗಿದೆ.

Ads on article

Advertise in articles 1

advertising articles 2

Advertise under the article

ಸುರ