-->
ಮಂಗಳೂರು: ಡ್ರಿಂಕ್ಸ್ ಬಿಲ್ ಮೊತ್ತ ಕೇಳಿದ್ದೇ ತಪ್ಪಾಯ್ತು - ಇರಿದು ಕೊಲೆಗೆ ಯತ್ನ

ಮಂಗಳೂರು: ಡ್ರಿಂಕ್ಸ್ ಬಿಲ್ ಮೊತ್ತ ಕೇಳಿದ್ದೇ ತಪ್ಪಾಯ್ತು - ಇರಿದು ಕೊಲೆಗೆ ಯತ್ನ

ಮಂಗಳೂರು: ಡ್ರಿಂಕ್ಸ್ ಬಿಲ್ ನ ಮೊತ್ತ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಕೊಲೆಗೆತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಆರೋಪಿ ಮೊಹಮ್ಮದ್ ಹನೀಫ್ ಅಲಿಯಾಸ್ ಚಾಕು(30) ಬಂಧಿತ ಆರೋಪಿ.

ಆಗಸ್ಟ್ 18ರಂದು ರಾತ್ರಿ 10-15ರ ವೇಳೆ ಮಂಗಳೂರಿನ ಸರ್ವಿಸ್ ಬಸ್ ನಿಲ್ದಾಣದ ಗೂಡಂಗಡಿ ಎದುರು ಈರಪ್ಪ ಕುರಿ ಎಂಬಾತ ಮೊಹಮ್ಮದ್ ಹನೀಫ್ ನಲ್ಲಿ ಡ್ರಿಂಕ್ಸ್ ಮಾಡಿರುವ ಬಿಲ್ ಮೊತ್ತ ಕೊಡುವಂತೆ ಕೇಳಿದ್ದಾನೆ. ಆಗ ಆರೋಪಿ ಮೊಹಮ್ಮದ್ ಹನೀಫ್ ಕೊಲೆಗೈಯುವ ಉದ್ದೇಶದಿಂದಲೇ ವಿರೇಶನ ಎಡಕೈಗೆ ಹಾಗೂ ಕುತ್ತಿಗೆಯ ಹಿಂಬದಿಗೆ ಫೋಲ್ಡಿಂಗ್ ಬೇಡ್ ನಿಂದ ಇರಿದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಪೊಲೀಸ್‌ ಠಾಣೆಯ ಪಿಎಸ್‌ಐ ಜ್ಯೋತಿ ಎಂ.ಜಿ.ಯವರು ಸಿಬ್ಬಂದಿಯ ಸಹಾಯದಿಂದ ಮೊಹಮ್ಮದ್ ಹನೀಫ್ ನನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article