ಸಿನಿಮಾ ನೋಡಲು ಥಿಯೇಟರ್ ಪ್ರವೇಶಿಸುತ್ತಿದ್ದಂತೆಯೇ ಯುವಕನ ಪ್ರಾಣಪಕ್ಷಿ ಹಾರಿಹೋಯ್ತು


ಲಕ್ನೋ: ಸಿನಿಮಾ ವೀಕ್ಷಣೆಗೆಂದು ಥಿಯೇಟರ್‌ನೊಳಗೆ ಹೋಗುತ್ತಿದ್ದ ಯುಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಸಿನಿಮಾ ಥಿಯೆಟರ್ ನಲ್ಲಿ ನಡೆದಿದೆ.

ದ್ವಾರಕಾಪುರಿ ನಿವಾಸಿ ಅಷ್ಟಕ್ ತಿವಾರಿ ಮೃತಪಟ್ಟ ವ್ಯಕ್ತಿ

ಅಷ್ಟಕ್‌ ತಿವಾರಿ ಶನಿವಾರ ಸಂಜೆ 7:50ರ ವೇಳೆಗೆ ಇತ್ತೀಚೆಗೆ ತೆರೆ ಕಂಡಿರುವ 'ಗದರ್-2‌ʼ ಸಿನಿಮಾ ನೋಡಲು ಲಖಿಂಪುರ ಖೇರಿಯಲ್ಲಿನ ಫನ್ ಸಿನಿಮಾ ಥಿಯೇಟರ್ ಗೆ ತೆರಳಿದ್ದಾರೆ. ಥಿಯೇಟರ್‌ ಒಳಗೆ ಬರುತ್ತಿದ್ದಾಗ ಫೋನ್ ನಲ್ಲಿ ಮಾತನಾಡುತ್ತಾ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೆಟ್ಟಲು ಹತ್ತಿ ಥಿಯೇಟರ್‌ ಒಳಗೆ ಪ್ರವೇಶಿಸಬೇಕೆನ್ನುವಾಗಲೇ ಅಷ್ಟಕ್ ತಿವಾರಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದವರು ಅಷ್ಟಕ್ ತಿವಾರಿ ನೆರವಿಗೆ ಧಾವಿಸಿದ್ದಾರೆ. ತಕ್ಷಣ ತಿವಾರಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಈ ವೇಳೆಗಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ತಿವಾರಿಯವರ ಫೋನ್ ಅನ್‌ಲಾಕ್ ಮಾಡಿ, ಅಲ್ಲಿದ್ದ ಗಾರ್ಡ್‌ಗಳು ಮತ್ತು ಬೌನ್ಸರ್‌ಗಳು ಅವರ ಕುಟುಂಬವನ್ನು ಸಂಪರ್ಕಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನೈಪಾಲ್ ಸಿಂಗ್ ಹೇಳಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu