ಕಾಲೇಜಿಗೆ ಬುರ್ಖಾ ( BURKHA) ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತಡೆ- VIDEO


ಮುಂಬಯಿ:  ಖಾಸಗಿ ಕಾಲೇಜೊಂದಕ್ಕೆ ಬುರ್ಖಾ ಧರಿಸಿ ಆಗಮಿಸಿದ್ದ ಕೆಲ ಮುಸ್ಲಿಂ ವಿದ್ಯಾರ್ಥಿಯನಿಯರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ತಡೆಯೊಡ್ಡಿದ ಘಟನೆ ಮುಂಬಯಿ ನಗರದ ಚೆಂಬೂರ್ ಪ್ರದೇಶದಲ್ಲಿ ವರದಿಯಾಗಿದೆ. 

ಬಳಿಕ ಪೋಷಕರು, ವಿದ್ಯಾರ್ಥಿಗಳು ಮತ್ತು ಪೊಲೀಸರ ಹಸ್ತಕ್ಷೇಪದ ನಂತರ ಆ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಯಿತು.

ಈ ಘಟನೆ ಬುಧವಾರದಂದು ನಡೆದಿದೆ. ಕಾಲೇಜು ಸಮವಸ್ತ್ರ ನೀತಿಯನ್ನು ಹೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಕಾಲೇಜಿನ ಗೇಟಿನ ಹೊರಗೆ ವಿದ್ಯಾರ್ಥಿನಿಯರು, ಅವರ ಹೆತ್ತವರೆಲ್ಲ ಸೇರಿರುವುದು ಹಾಗೂ ಅಲ್ಲಿ ಗೊಂದಲ ಸೃಷ್ಟಿಯಾಗಿರುವ ವೀಡಿಯೋಗಳು ವೈರಲ್ ಆದ ಬಳಿಕ  ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು.



ಹೆತ್ತವರು ಮತ್ತು ಕಾಲೇಜು ಆಡಳಿತದೊಂದಿಗೆ ಪೊಲೀಸರು ನಂತರ ಚರ್ಚೆ ನಡೆಸಿದರು. ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ತೆಗೆಯಲು ಒಪ್ಪಿದರೂ ತರಗತಿಯಲ್ಲಿ ಹಿಜಾಬ್ ಧರಿಸುವುದಾಗಿ ತಿಳಿಸಿದರು. ಕಾಲೇಜು ಆಡಳಿತ ಇದಕ್ಕೆ ಒಪ್ಪಿದ ನಂತರ ಸಮಸ್ಯೆ ಇತ್ಯರ್ಥವಾಯಿತು.

ತರಗತಿಗೆ ಹಾಜರಾಗುವ ಮುನ್ನು ವಿದ್ಯಾರ್ಥಿನಿಯರು ಕಾಲೇಜಿನ ವಾಶ್‌ರೂಮಿನಲ್ಲಿ ಬುರ್ಖಾ ತೆಗೆಯಬೇಕೆಂದು ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.