-->
1000938341
ಮದುವೆ ಫೋಟೊಗ್ರಾಫಿಗೆ ಬಂದಿದ್ದವಳು ವರನೊಂದಿಗೆ ಇಟ್ಕೊಂಡಳು ಅಫೇರ್: ಹಣ ವಾಪಾಸ್ ಮಾಡುವಂತೆ ಫೋಟೋಗ್ರಾಫರ್ ಗೆ ದುಂಬಾಲು ಬಿದ್ದ ವಧು

ಮದುವೆ ಫೋಟೊಗ್ರಾಫಿಗೆ ಬಂದಿದ್ದವಳು ವರನೊಂದಿಗೆ ಇಟ್ಕೊಂಡಳು ಅಫೇರ್: ಹಣ ವಾಪಾಸ್ ಮಾಡುವಂತೆ ಫೋಟೋಗ್ರಾಫರ್ ಗೆ ದುಂಬಾಲು ಬಿದ್ದ ವಧು

ನವದೆಹಲಿ: ಮದುವೆಯ ಫೋಟೋಗ್ರಫಿಗೆ ಬಂದಿದ್ದ ಫೋಟೋಗ್ರಾಫರ್ ಗೆ ಆರ್ಡರ್ ಕೊಟ್ಟಿದ್ದ ವಧು ತಾನು ಫೋಟೊಗ್ರಾಫಿಗೆ ನೀಡಿರುವ ಹಣವನ್ನು ವಾಪಸ್ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆಲ್ಲ ಕಾರಣವಾಗಿರುವ ಸಂಗತಿಯೊಂದು ಹೊರಬಿದ್ದಿದ್ದು, ಇದರ ವಿಚಾರವೀಗ ಜಗಜ್ಜಾಹೀರು ಆಗಿದೆ.

ಈ ಫೋಟೋಗ್ರಾಫರ್​ ಸೋಷಿಯಲ್ ಮೀಡಿಯಾದಲ್ಲಿ ವಧು ಹಣ ವಾಪಾಸ್ ಮಾಡಬೇಕೆಂದು ಈ ವಿಚಿತ್ರ ಪ್ರಸಂಗವೊಂದು ಹೇಳಿಕೊಂಡು ಪರಿಹಾರ ಕೇಳಿದ್ದಾನೆ. ಈ ಫೋಟೋಗ್ರಾಫರ್ ಕೆಲ ಸಮಯಗಳ ಹಿಂದೆ ಮದುವೆಯೊಂದಕ್ಕೆ ಫೋಟೊಗ್ರಾಫಿಗಾಗಿ ಹೋಗಿದ್ದ. ಆದರೆ ಸಹಾಯಕನಾಗಿ ಬರುತ್ತಿದ್ದ ಹುಡುಗ ಅಂದು ಲಭ್ಯವಿರದ್ದ ಕಾರಣ ಸಹಾಯಕನಿಗಾಗಿ ಆನ್​​ಲೈನ್​ನಲ್ಲಿ ಹುಡುಕಾಡಿದ್ದಾನೆ. ಆಗ ಒಬ್ಬಳು ಲೇಡಿ ಫೋಟೋಗ್ರಾಫರ್​ ಲಭಿಸಿದ್ದು, ಆಕೆಯನ್ನು ಸಹಾಯಕಿಯಾಗಿ ಕರೆದುಕೊಂಡು ಮದುವೆಗೆ ಹೋಗಿದ್ದಾನೆ.

ಮದುವೆ ಫೋಟೋಗ್ರಫಿ ಎಲ್ಲಾ ಮುಗಿದು ಅದಕ್ಕಾಗಿ ಹಣವೂ ಪಾವತಿ ಆಗಿತ್ತು. ಆದರೆ ಅದಾಗಿ ಕೆಲ ದಿನಗಳ ಮೇಲೆ ಫೋಟೋಗ್ರಾಫರ್​ಗೆ ವಧುವಿನಿಂದ ಬಂದಿರುವ ಇ-ಮೇಲ್ ಆತನನ್ನು ಚಿಂತೆಗೀಡುಮಾಡಿದೆ. ಆಕೆ "ನಿಮ್ಮೊಂದಿಗೆ ಬಂದಿದ್ದ ಸಹಾಯಕಿ ನನ್ನ ಪತಿಯೊಂದಿಗೆ ಅಫೇರ್ ಹೊಂದಿದ್ದು, ಫೋಟೋಗ್ರಫಿಗೆ ನೀಡಿದ್ದ ಹಣ ಹಿಂದಿರುಗಿಸಿ" ಎಂದು ಆಕೆ ಒತ್ತಾಯಿಸಿ ಇ-ಮೇಲ್​ ಕಳಿಸಿದ್ದಳು.​

ನಾನು ಅಂದು ನನ್ನ ಸಹಾಯಕ ಇರದ್ದರಿಂದ ಆನ್​ಲೈನ್​ನಲ್ಲಿ ದೊರಕಿರುವ ಲೇಡಿ ಫೋಟೋಗ್ರಾಫರ್​​ನ ಸಹಾಯಕಿಯಾಗಿ ಕರೆದುಕೊಂಡು ಹೋಗಿದ್ದೆ. ಆದರೆ ಆಕೆ ಮದುವೆ ಬಳಿಕ ವರನೊಂದಿಗೆ ಅಫೇರ್​ ಹೊಂದಿ ಜತೆಗೇ ಮಲಗಿದ್ದ ವಿಚಾರ ವಧುವಿನಿಂದ ಬೆಳಕಿಗೆ ಬಂದಿದೆ. ಆಕೆ ಅದಕ್ಕೆ ಸಂಬಂಧಿತ ಫೋಟೋ ಕೂಡ ಕಳಿಸಿಕೊಟ್ಟಿದ್ದಾಳೆ. ವಧು ಬಗ್ಗೆ ಬೇಸರವಾಗುತ್ತಿದೆಯಾದರೂ ನಾನೀಗ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಫೋಟೋಗ್ರಾಫರ್ ರೆಡ್ಡಿಟ್​ನಲ್ಲಿ ಹೇಳಿಕೊಂಡಿದ್ದಾನೆ.

Ads on article

Advertise in articles 1

advertising articles 2

Advertise under the article