ಹೀಗೂ ಉಂಟೆ?- 7 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿತ್ತು 2 ಕೆ.ಜಿ. ಭ್ರೂಣ!

ಪ್ರತಾಪಗಢ: ತಾಯಿಯ ಗರ್ಭದಲ್ಲಿ 2 ಕೆ.ಜಿ. ತೂಕದ ಭ್ರೂಣ ಇರುವುದು ಸಾಮಾನ್ಯ.  ಆದರೆ 7 ತಿಂಗಳ ಹಿಂದಷ್ಟೇ ತಾಯಿ ಗರ್ಭದಿಂದ ಹೊರಬಂದ ಮಗುವಿನ ಹೊಟ್ಟೆಯಲ್ಲೂ 2 ಕೆ.ಜಿ. ಭ್ರೂಣ ಇದ್ದರೆ? ಅದೂ ಗಂಡುಮಗುವಿನ ಹೊಟ್ಟೆಯಲ್ಲಿ . ವಿಚಿತ್ರವಾದರೂ ಇದು ಸತ್ಯ. 

ಉತ್ತರ ಪ್ರದೇಶದಲ್ಲಿ 7 ತಿಂಗಳ ಕೂಸಿನ ಹೊಟ್ಟೆಯಲ್ಲಿ 2 ಕೆ.ಜಿ. ತೂಕದ ಭ್ರೂಣವನ್ನು ವೈದ್ಯರು ಯಶಸ್ವಿಯಾಗಿ ಹೊರತೆಗಿದ್ದಾರೆ.

ಪ್ರತಾಪಗಢ ಮೂಲದ ರೈತರೊಬ್ಬರ ಏಳು ತಿಂಗಳ ಮಗು ಆಗಾಗ ಹೊಟ್ಟೆ ನೋವಿನಿಂದ ಅಳುತ್ತಿತ್ತು. ಹಲವು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಗುವಿನ ತಂದೆ, ಇಲ್ಲಿನ ಸರೋಜಿನಿ ನಾಯ್ಡು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ಸಿಟಿ ಸ್ಕ್ಯಾನ್ ಮಾಡಿದಾಗ ಅದರ ಹೊಟ್ಟೆಯಲ್ಲಿ 2 ಕೆ.ಜಿ ಭ್ರೂಣವಿದೆ ಎಂದು ತಿಳಿದುಬಂದಿದೆ. 

ವೈದ್ಯರ ತಂಡ ನಾಲ್ಕು ಗಂಟೆ ಆಪರೇಷನ್ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆದಿದೆ. ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ.

ದುರದೃಷ್ಟವೆಂದರೆ, ವೈದ್ಯಕೀಯ ರಂಗದಲ್ಲಿ ಇಂತಹ ಪ್ರಕರಣ ಅಪರೂಪ. ತಾಯಿಯ ಗರ್ಭದಲ್ಲಿ ಎರಡು ಭ್ರೂಣಗಳು ರೂಪುಗೊಂಡು, ಈ ಪೈಕಿ ಒಂದು ತಾಯಿಯ ಗರ್ಭದಲ್ಲಿ ಬೆಳೆದರೆ, ಮತ್ತೊಂದು ಹೊಟ್ಟೆಯಲ್ಲಿರುವ ಮತ್ತೊಂದು ಮಗುವಿನ ಗರ್ಭದಲ್ಲಿ ಬೆಳವಣಿಗೆಯಾಗುತ್ತದೆ. ಈ ಪ್ರಕರಣದಲ್ಲಿ ಮಗುವಿನ ತಾಯಿ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.