ಕಾರವಾರ: ಆಟವಾಡುತ್ತಿದ್ದ ಮೂರು ವರ್ಷದ ಮಗು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಹರಿದೇವ ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಸೂರಜ್ ಬಂಟ್ ಎಂಬವರ ಪುತ್ರಿ ಸ್ತುತಿ (3) ಸಾವನ್ನಪ್ಪಿದ ಮಗು
ಮಗು ಆಟವಾಡುತ್ತಾ ಸಾರ್ವಜನಿಕ ಬಾವಿ ಹತ್ತಿರ ಹೋಗಿದ್ದು, ಈ ವೇಳೆ ಆಯಾ ತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ನಗರಸಭೆಯಿಂದ ತೆಗೆದ ಸಾರ್ವಜನಿಕ ಬಾವಿ ರಸ್ತೆ ಪಕ್ಕದಲ್ಲೇ ಇದ್ದು ಇದಕ್ಕೆ ಕಟ್ಟಿದ ಕಟ್ಟೆ ತುಂಬಾ ಕೆಳಮಟ್ಟದ್ದಾಗಿದ್ದು ಬಾವಿ ಕಟ್ಟೆಯನ್ನು ಎತ್ತರ ಕಟ್ಟದೇ ಇರುವುದೇ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.