-->
1000938341
ದಿನವೊಂದಕ್ಕೆ ಒಂದು ಗಂಟೆಯಷ್ಟೇ ಕೆಲಸ: ವರ್ಷಕ್ಕೆ 1.2 ಕೋಟಿ ಸಂಬಳ ಪಡೆಯುವ ಟೆಕ್ಕಿ

ದಿನವೊಂದಕ್ಕೆ ಒಂದು ಗಂಟೆಯಷ್ಟೇ ಕೆಲಸ: ವರ್ಷಕ್ಕೆ 1.2 ಕೋಟಿ ಸಂಬಳ ಪಡೆಯುವ ಟೆಕ್ಕಿ


ನವದೆಹಲಿ: ಪ್ರತಿಷ್ಠಿತ ಗೂಗಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ದಿನೊಂದಕ್ಕೆ ಒಂದು ಗಂಟೆ ಮಾತ್ರ ಕೆಲಸ ಮಾಡಿ ವರ್ಷಕ್ಕೆ ಬರೋಬ್ಬರಿ 1.2 ಕೋಟಿ ರೂ. ಸಂಬಳ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

ದೇವನ್‌ ಎಂಬ ಟೆಕ್ಕಿಯೇ ಇಷ್ಡೊಂದು ಮೊತ್ತದ ಸಂಬಳ ಪಡೆಯುವಾತ. ಈ ವರ್ಷ ಈತ ಸಂಬಳದೊಂದಿಗೆ ಬೋನಸ್‌ ಕೂಡ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಗೂಗಲ್‌ ಉಪಕರಣಗಳು ಹಾಗೂ ಉತ್ಪನ್ನಗಳಿಗೆ ಕೋಡ್‌ ಬರೆಯುವ ಕೆಲಸವನ್ನು ದೇವನ್‌ ಮಾಡುತ್ತಿದ್ದಾರೆ. ತಮ್ಮ ಮೇಲಾಧಿಕಾರಿಗಳು ನೀಡುವ ವಾರದ ಕೆಲಸವನ್ನು ಈತ ಕೆಲವೇ ದಿನದಲ್ಲಿ ಪೂರ್ಣಗೊಳಿಸುತ್ತಾರಂತೆ. ಉಳಿದ ದಿನಗಳಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಕಳೆದ ಬಾರಿ ಪ್ರಾಜೆಕ್ಟ್ ಒಂದನ್ನು ಬೇಗ ಪುರ್ಣಗೊಳಿಸಿ, ಉಳಿದ ಅವಧಿಯಲ್ಲಿ ರಜೆ ಮೇಲೆ ಹವಾಯ್‌ಗೆ ಪ್ರವಾಸಕ್ಕೆ ಹೋಗಿದ್ದಾನಂತೆ.

“ಕೆಲಸ-ಜೀವನದ ಸಮತೋಲನ ಮತ್ತು ಸೌಲಭ್ಯಗಳಿಗಾಗಿ ಅನೇಕ ಉದ್ಯೋಗಿಗಳು ಗೂಗಲ್‌ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾರ್ಡ್‌ ವರ್ಕ್‌ ಮಾಡುವ ಬದಲು ಸ್ಮಾರ್ಟ್‌ ವರ್ಕ್‌ಗೆ ನಾನು ಮೊರೆ ಹೋಗುತ್ತೇನೆ’ ಎಂದು ದೇವನ್‌ ಹೇಳಿದ್ದಾರೆ. ವಿಶಾಲವಾದ ಕ್ಯಾಂಪಸ್‌, ಉಚಿತ ಆಹಾರ ಮತ್ತು ದೊಡ್ಡ ಪ್ರಮಾಣದ ಸಂಬಳದ ಕಾರಣ ಗೂಗಲ್‌ ಕಂಪನಿ ಪ್ರಖ್ಯಾತವಾಗಿದೆ.


Ads on article

Advertise in articles 1

advertising articles 2

Advertise under the article