-->
1000938341
ಭಾರತದ ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ - ಲಂಡನ್ ನ‌ ಶಿಕ್ಷಕನಿಗೆ 12ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

ಭಾರತದ ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹ - ಲಂಡನ್ ನ‌ ಶಿಕ್ಷಕನಿಗೆ 12ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

ನವದೆಹಲಿ: ಭಾರತದ ಅಪ್ರಾಪ್ತ ಮಕ್ಕಳ ಬೆತ್ತಲೆ ಹಾಗೂ ಅಶ್ಲೀಲ ಫೋಟೊಗಳನ್ನು ಸಂಗ್ರಹಿಸುತ್ತಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷಗಳ  ಕಾರಾಗೃಹ ಶಿಕ್ಷೆಯನ್ನು ಲಂಡನ್​ನ ಸೌತ್​ವಾರ್ಕ್ ಕ್ರೌನ್​ ಕೋರ್ಟ್​ ವಿಧಿಸಿದೆ.

ಈಸ್ಟ್ ಡಲ್ವಿಚ್​ ನಿವಾಸಿ ಮ್ಯಾಥ್ಯೂ ಸ್ಮಿತ್​ (35) ಶಿಕ್ಷೆಗೊಳಗಾದ ಅಪರಾಧಿ. ಈತ ಲಂಡನ್​ನ ಶಾಲೆಯೊಂದರಲ್ಲಿ ಉಪ ಮುಖ್ಯೋಪಾಧ್ಯಾಯವಾಗಿ ವೃತ್ತಿ ನಿರ್ವಹಿಸುತ್ತಿದ್ದ. ಈತನನ್ನು 2022ರ ನವೆಂಬರ್​ನಲ್ಲಿ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್​ಸಿಎ) ಬಂಧಿಸಿತ್ತು.

ಈತ ಭಾರತದ ಹದಿಹರೆಯದವರನ್ನು ಸಂಪರ್ಕಿಸಿ ಅವರಿಗಿಂತ ಸಣ್ಣ ಮಕ್ಕಳ ಬೆತ್ತಲೆ ಇಲ್ಲವೇ ಅಶ್ಲೀಲ ಫೋಟೋಗಳನ್ನು ಕಳಿಸಿಕೊಡುವಂತೆ ಹೇಳುತ್ತಿದ್ದ. ಅಲ್ಲದೆ ಅದಕ್ಕೆ ಪ್ರತಿಯಾಗಿ ಹಣ ನೀಡುವ ಆಮಿಷವೊಡ್ಡುತ್ತಿದ್ದ. ಆನ್​​ಲೈನ್​ನಲ್ಲಿ ಇಂಥ ಕೆಲಸವನ್ನು ಮಾಡುತ್ತಿದ್ದಾಗಲೇ ಈತ ಸಿಕ್ಕಿಬಿದ್ದಿಉ ಬಂಧಿಸಲ್ಪಟ್ಟಿದ್ದಾನೆ.

ಮಕ್ಕಳ ಲೈಂಗಿಕ ಶೋಷಣೆಗೆಂದೇ ಈತ ಡಾರ್ಕ್​ ವೆಬ್​ ಸೈಟ್​​ಗಳನ್ನು ಹೊಂದಿದ್ದ. ಮಕ್ಕಳ ಚಿತ್ರಗಳನ್ನು ಪಡೆದುಕೊಂಡು ಅವುಗಳಿಗೆ ಅಪ್​ಲೋಡ್ ಮಾಡುತ್ತಿದ್ದ. ಮಕ್ಕಳೊಂದಿಗೆ ಹೇಗೆ ಲೈಂಗಿಕವಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಹದಿಹರೆಯದವರಿಗೆ ಸೂಚನೆ ನೀಡುತ್ತಿದ್ದ. ಈತ ಅದಕ್ಕೆ ಪೂರಕವಾಗಿ ಕೆಲ ಫೋಟೋ/ವಿಡಿಯೋ ಕಳಿಸಿ ಅದೇ ರೀತಿ ವರ್ತಿಸಿ ಫೋಟೋ/ವಿಡಿಯೋ ಕಳಿಸುವಂತೆ ಹೇಳಿಕೊಡುತ್ತಿದ್ದ ಬಗ್ಗೆಯೂ ದಾಖಲೆ ದೊರಕಿದೆ.

ಅಲ್ಲದೆ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೇಗೆ ಅವರ ಸ್ನೇಹ ಗಳಿಸಬೇಕು ಎಂಬುದರ ಬಗ್ಗೆಯೂ ಈತ ಮಾರ್ಗದರ್ಶನ ನೀಡುತ್ತಿದ್ದ. ಈತ ನೇಪಾಳದಲ್ಲಿ ಬಹಳಷ್ಟು ಕಾಲ ಇದ್ದಿದ್ದ. ಅಲ್ಲಿದ್ದಾಗ ಇಂಥಹ ಅಪರಾಧಗಳನ್ನು ಎಸಗಿದ್ದ. ಇದಕ್ಕೂ ಮೊದಲು ಈತ 2007-14ರ ಅವಧಿಯಲ್ಲಿ ಭಾರತದ ವಿವಿಧ ಅನಾಥಾಶ್ರಮ ಹಾಗೂ ಎನ್​ಜಿಒಗಳಲ್ಲಿ ಕೆಲಸ ಮಾಡಿದ್ದಾನೆ.

ಸ್ಮಿತ್​ನ ಲ್ಯಾಪ್​ಟಾಪ್​, ಎಸ್​ಡಿ ಕಾರ್ಡ್ ಹಾಗೂ ಮೊಬೈಲ್​ಫೋನ್​ಗಳಲ್ಲಿ ಸೇವ್ ಆಗಿದ್ದ ಮಕ್ಕಳ 1.2 ಲಕ್ಷಕ್ಕೂ ಅಧಿಕ ಫೋಟೋಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. 13 ವರ್ಷ ಕೆಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತೆ ಪ್ರೇರೇಪಿಸಿದ್ದ ಹಲವು ಪ್ರಕರಣಗಳು ಈತನ ಮೇಲಿವೆ.

Ads on article

Advertise in articles 1

advertising articles 2

Advertise under the article