ವಾಯುಪಡೆಯಲ್ಲಿ ಉದ್ಯೋಗಾವಕಾಶ: ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ

ವಾಯುಪಡೆಯಲ್ಲಿ ಉದ್ಯೋಗಾವಕಾಶ: ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ





ಅಗ್ನಿವೀರ್ ವಾಯು ನೇಮಕಕ್ಕೆ ಭಾರತೀಯ ವಾಯುಪಡೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಭಾರತೀಯ ವಾಯುಪಡೆ ಅರ್ಜಿ ಸಲ್ಲಿಸಲು ಆಗಸ್ಟ್ 17, 2023 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದೆ.



ಈ ವರ್ಷ ಒಟ್ಟು 4,165 ಹುದ್ದೆಗಳಿಗೆ ನೇಮಕಾತಿ ಮಾಡಲಾಗುವುದು. ಮಹಿಳೆಯರಿಗೆ 833 ಹುದ್ದೆಗಳನ್ನು ಮೀಸಲಿಡಲಾಗಿದೆ. ಮೂರು ಹಂತಗಳಲ್ಲಿ ನೇಮಕಾತಿ ನಡೆಯಲಿದ್ದು, ಅಕ್ಟೋಬರ್ 13ರಂದು ಆನ್‌ಲೈನ್ ಪರೀಕ್ಷೆ ಆರಂಭವಾಗಲಿದೆ.



ಕೆಲವು ಶೈಕ್ಷಣಿಕ ಮತ್ತು ದೈಹಿಕ ಅರ್ಹತೆಗಳನ್ನು ಪೂರೈಸಿರುವ ಎಲ್ಲ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣದ ಕೊಂಡಿ ಬಳಸಬಹುದು.

agnipathvaya.edac.in

indianairforce.nic.in