-->
1000938341
ದಕ್ಷಿಣ ಭಾರತದಿಂದ ಸ್ಪರ್ಧಿಸಲಿದ್ದಾರೆ ಪ್ರಧಾನಿ ಮೋದಿ- ರಾಮನಾಥಪುರಂ ಫೈನಲ್ ?

ದಕ್ಷಿಣ ಭಾರತದಿಂದ ಸ್ಪರ್ಧಿಸಲಿದ್ದಾರೆ ಪ್ರಧಾನಿ ಮೋದಿ- ರಾಮನಾಥಪುರಂ ಫೈನಲ್ ?


ಹೊಸದಿಲ್ಲಿ: ಮುಂಬರುವ (2024) ಲೋಕಸಭಾ ಚುನಾವಣೆ ಗೆಲುವಿಗೆ ಹೊಸ ರಣತಂತ್ರ ಹೆಣೆದಿರುವ ಬಿಜೆಪಿ, ದಕ್ಷಿಣದ ರಾಜ್ಯಗಳ ಕಣ್ಣಿಟ್ಟು ತಮಿಳುನಾಡು ರಾಜ್ಯದ ರಾಮನಾಥಪುರಂ (Ramanathapuram) ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ( Narendra modi) ಅವರನ್ನು ಕಣಕ್ಕಳಿಸುವ ಚಿಂತನೆಯನ್ನು ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೈದರಾಬಾದ್‌ನಲ್ಲಿ ನಡೆದ ಹನ್ನೊಂದು ರಾಜ್ಯಗಳ ಮುಖಂಡರ ಸಭೆಯಲ್ಲಿ ದಖನ್ ಪ್ರಸ್ಥಭೂಮಿ ಮೇಲೆ ಕೇಂದ್ರೀಕರಿಸಿ ಚುನಾವಣಾ ರಣತಂತ್ರವನ್ನು ಹೆಣೆಯಲಾಗಿದೆ. ದಕ್ಷಿಣದ ರಾಜ್ಯಗಳ ಮೇಲೆ ಹಿಡಿತ ಸಾಧಿಸಲು ಮೋದಿ ಜನಪ್ರಿಯತೆ ಯನ್ನು ಬಳಸಲು ಬಿಜೆಪಿ ಮುಂದಾಗಿದೆ.

 ತಮಿಳುನಾಡಿನ ಹಿಂದೂ ಧಾರ್ಮಿಕ ಕ್ಷೇತ್ರವಾದ ರಾಮನಾಥಪುರಂನಿಂದ ಸ್ಪರ್ಧೆಗಿಳಿಸಿ, ತಮಿಳುನಾಡು, ಕರ್ನಾಟಕ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಕನಿಷ್ಠ 60 ಸ್ಥಾನ ಗೆಲ್ಲಲು ಯೋಜನೆಯನ್ನು ರೂಪಿಸಿದೆ. ಇದು ಆಡಳಿತ ವಿರೋಧಿ ಅಲೆಯಿಂದ ಉತ್ತರದಲ್ಲಿ ಕಳೆದುಕೊಳ್ಳಬಹುದಾದ ಸ್ಥಾನಗಳನ್ನು ದಕ್ಷಿಣದಲ್ಲಿ ತುಂಬಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮುಂದಾಲೋಚನೆ ಯಾಗಿದೆ. 
 
ಮೋದಿ ಅವರನ್ನು ರಾಮನಾಥಪುರಂ ನಿಂದ ಕಣಕ್ಕಿಳಿಸಲು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡಿ ಬಂದಿದೆ ಎಂದು ತಿಳಿದುಬಂದಿದೆ. ಕ್ಷೇತ್ರದ ವಾಸ್ತವ ಪರಿಸ್ಥಿತಿ, ಗೆಲ್ಲಲು ಅನುಸರಿಸ ಬೇಕಾದ ರಣತಂತ್ರ ರೂಪಿಸಲು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಕಿಶನ್ ರೆಡ್ಡಿ ಹೆಗಲಿಗೆ ವಹಿಸಲಾಗಿದೆ ಎಂದು ಮೂಲಗಳು ಹೇಳಿವೆ. 

ರಾಮನಾಥಪುರಂ ಮುಸ್ಲಿಂ ಬಾಹುಳ್ಯ ಕ್ಷೇತ್ರ. ದೊಡ್ಡಮಟ್ಟದ ಹಿಂದೂಗಳ ಕೂಡ ಮತಬ್ಯಾಂಕ್ ಇಲ್ಲಿದೆ. ಪ್ರಸ್ತುತ ಇಂಡಿಯನ್ ಮುಸ್ಲಿಂ ಲೀಗ್‌ನ ಕೆ. ನವಸ್ಥನಿ ಇಲ್ಲಿ ಸಂಸದರಾಗಿದ್ದಾರೆ. ವಾರಾಣಸಿಯಂತೆ ರಾಮನಾಥ ಪುರಂನಲ್ಲೂ ಹಿಂದೂ ಮತಬುಟ್ಟಿ ಮೇಲೆ ಕಣ್ಣಿಟ್ಟು ಮೊದಿ ಅವರನ್ನು ಕಣಕ್ಕಳಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ. ಒಂದೊಮ್ಮೆ ಮೋದಿ ಇಲ್ಲಿಂದ ಕಣಕ್ಕೆ ಇಳಿದರೆ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿಗೆ ಸಹಕಾರಿಯಾಗಲಿದೆ ಎಂಬುದು  ಬಿಜೆಪಿ ಪಕ್ಷದ ಲೆಕ್ಕಾಚಾರವಾಗಿದೆ.

Ads on article

Advertise in articles 1

advertising articles 2

Advertise under the article