ಕೊಚ್ಚೆ, ಗುಂಡಿಗಳ ನಗರ: ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಬಡಾವಣೆಯ ಸೌಂದರ್ಯ ಸವಿಯಿರಿ...!

ಕೊಚ್ಚೆ, ಗುಂಡಿಗಳ ನಗರ: ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಬಡಾವಣೆಯ ಸೌಂದರ್ಯ ಸವಿಯಿರಿ...!





ಮಂಗಳೂರು ನಗರದ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ಲ್ಯಾಂಡ್ ಲಿಂಕ್ಸ್ ಬಡಾವಣೆಯೂ ಒಂದು. ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಸುಮಾರು ಎರಡೂವರೆ ದಶಕಗಳ ಹಿಂದೆ ನಿರ್ಮಿಸಿದ ಇಲ್ಲಿ ಸಾವಿರಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ.



ಏಷ್ಯಾದಲ್ಲೇ ಅತಿ ಸುಸಜ್ಜಿತ ಬಡಾವಣೆ ಎಂಬ ಖ್ಯಾತಿ ಪಡೆದಿದ್ದ ಈ ಲ್ಯಾಂಡ್ ಲಿಂಕ್ಸ್ ಬಡಾವಣೆ ಈಗ ಕೊಚ್ಚೆ, ಗುಂಡಿಗಳ ನಗರವಾಗಿ ಕುಖ್ಯಾತಿ ಗಳಿಸಿದೆ.



ಪ್ರಮುಖ ರಸ್ತೆಗಳಲ್ಲಿ ದೊಡ್ಡ ಹೊಂಡಗಳು, ಗುಂಡಿಗಳು ಸರಾಗ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತದೆ. ಪ್ರಮುಖ ರಸ್ತೆಗಳು ಡಾಮರ್ ಕಾಣದೆ ದಶಕವೇ ಸಂದಿದೆ. ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲಿ ನಡೆದಿಲ್ಲ.



ಇನ್ನು, ನೀವು ಇಲ್ಲಿನ ಯಾವುದೇ ರಸ್ತೆ, ಒಳ ರಸ್ತೆಗೆ ಹೋದರೆ ಗುಂಡಿಗಳು ಕಾಣ ಸಿಗುತ್ತದೆ. ಅಗೆದ ರೋಡ್‌ ಸರಿಪಡಿಸದೆ ದಶಕಗಳೇ ಸಂದಿವೆ. ಇಲ್ಲಿನ ಕಾರ್ಪೊರೇಟರ್‌ ರಜನಿ ಕೋಟ್ಯಾನ್ ಪಕ್ಕದ ಪದವಿನಂಗಡಿಯಲ್ಲಿ ವಾಸವಿರುವವರು. ಆದರೆ, ಅವರು ಈ ಪ್ರದೇಶದಲ್ಲಿ ಕಾಣಸಿಗೋದು ಅಪರೂಪದಲ್ಲಿ ಅಪರೂಪ.


ಚುನಾವಣೆಗೆ ಒಮ್ಮೆ ಕಾಣಸಿಕ್ಕರೆ ಮತ್ತೆ ಅವರ ಮುಖ ದರ್ಶನ ಆಗೋದು ಇನ್ಯಾವಾಗಲೋ... ತಮ್ಮ ಸಮಸ್ಯೆಯನ್ನು ಇವರ ಮುಂದಿಡಲು ಮಹಾಜನತೆ ಈ ಜನಪ್ರತಿನಿಧಿಗೆ ಫೋನ್ ಮಾಡಿದರೆ ಬಹುತೇಕ ಸಂದರ್ಭದಲ್ಲಿ ಅವರು ಅಲಭ್ಯರಾಗಿರುತ್ತಾರೆ. 



ಇದನ್ನೂ ಓದಿ:

ರಾತೋ ರಾತ್ರಿ ಕಾರ್ಪೊರೇಟರ್‌ಗೆ ಘೇರಾವ್‌: ಮಂಗಳೂರಿನಲ್ಲಿ ಜನಪ್ರತಿನಿಧಿ ವಿರುದ್ಧ ಮುತ್ತಿಗೆ ಹಾಕಿ ನಾಗರಿಕರ ಆಕ್ರೋಶ


BREAKING NEWS
Loading latest news...
Join our WhatsApp Channel Powered By : Online Pudu