-->
1000938341
ಫೇಸ್ ಬುಕ್ ಗೆಳೆಯನೊಂದಿಗೆ ಪತ್ನಿ ಪರಾರಿ : ಕಿಡ್ನ್ಯಾಪ್ ದೂರು ನೀಡಿದ ಪತಿ

ಫೇಸ್ ಬುಕ್ ಗೆಳೆಯನೊಂದಿಗೆ ಪತ್ನಿ ಪರಾರಿ : ಕಿಡ್ನ್ಯಾಪ್ ದೂರು ನೀಡಿದ ಪತಿ


ಹೈದರಾಬಾದ್: ಫೇಸ್‌ಬುಕ್ ಗೆಳೆಯನೊಂದಿಗೆ ವಿವಾಹಿತೆಯೊಬ್ಬಳು ಪರಾರಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇದೀಗ ಆಕೆಯ ಪತಿ ತನ್ನ ಪತ್ನಿಯನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದಾನೆ.

ಹೈದರಾಬಾದ್ ನಿವಾಸಿ ಸಲೋನಿ ಜೈನ್ ಎಫ್ ಬಿ ಗೆಳೆಯನೊಂದಿಗೆ ಪರಾರಿಯಾದಾಕೆ. ಈಕೆಯನ್ನು ಕಾಸ್ಮೆಟಿಕ್ ವ್ಯಾಪಾರಿ ಸಂಜಯ್ ಎಂಬಾತ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ. ಈ ದಂಪತಿಗೆ ಎರಡು ವರ್ಷದ ಪುತ್ರ ಮತ್ತು ಆರು ತಿಂಗಳ ಹೆಣ್ಣು ಮಗುವಿದೆ. ಸುಮಾರು ಒಂದು ವರ್ಷದ ಹಿಂದೆ ಸಲೋನಿ ಇಂದೋರ್‌ನ ರೋಹಿತ್ ಶರ್ಮಾ ಎಂಬಾತನೊಂದಿಗೆ ಫೇಸ್‌ಬುಕ್ ಮೂಲಕ ಸ್ನೇಹ ಬೆಳೆಸಿದ್ದಾಳೆ. ಇವರಿಬ್ಬರ ನಡುವೆ ದೂರವಾಣಿ ಕರೆಯಲ್ಲಿ ಮಾತನಾಡುವಷ್ಟು ಸ್ನೇಹ ಬೆಳೆದಿತ್ತು. ಇದನ್ನು ಆಕೆಯ ಪತಿ ಪತ್ತೆ ಹಚ್ಚಿದ್ದು, ಸಲೋನಿಯ ಪೋಷಕರಿಗೆ ತಿಳಿಸಿದ್ದಾನೆ. ಆಗ ಆಕೆಯ ತಂದೆ ಮೋಹನ್ ಇಂದೋರ್‌ನ ಅನ್ನಪೂರ್ಣ ಪ್ರದೇಶದ ನಿವಾಸಿಯಾಗಿರುವ ರೋಹಿತ್ ವಿಳಾಸವನ್ನು ಪತ್ತೆ ಹಚ್ಚಿ ಆತನ ಮನೆಗೆ ತೆರಳಿ ರೋಹಿತ್ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲಿಂದ ಹೊರಟ ಮೋಹನ್ ಅನ್ನಪೂರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಎಸಿಪಿ ಬಿಪಿಎಸ್ ಪರಿಹಾರ್ ಹಾಗೂ ದ್ವಾರಕಾಪುರಿ ಠಾಣೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ದೂರಿದ್ದರು. ಇದಾದ ಬಳಿಕವೂ ಸಲೋನಿ ಹಾಗೂ ರೋಹಿತ್ ಸಂಭಾಷಣೆ ನಿರಂತರವಾಗಿ ನಡೆಯುತ್ತಲೇ ಇತ್ತು. ಈ ನಡುವೆ ಸಲೋನಿಯು ಇಂದೋರ್‌ಗೆ ಬಂದು ರೋಹಿತ್‌ನನ್ನೂ ಭೇಟಿಯಾಗಿದ್ದಳು.

ಕೊನೆಗೆ 10 ದಿನಗಳ ಹಿಂದೆ ರೋಹಿತ್, ಹೈದರಾಬಾದ್‌ಗೆ ಬಂದಿದ್ದು ಅಂದಿನಿಂದ ಇಬ್ಬರು ನಾಪತ್ತೆಯಾಗಿದ್ದಾರೆ. ಪತ್ನಿ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಿಸಿದ ಬಳಿಕ ಆಕೆಯ ಪತಿ ಪೊಲೀಸ್ ಠಾಣೆಗೆ ತೆರಳಿ ರೋಹಿತ್‌ನೇ ತನ್ನ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ದೂರು ನೀಡಿದ್ದಾನೆ. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿ, ರೋಹಿತ್ ಮನೆಗೆ ತಲುಪಿದ್ದು ಅಲ್ಲಿಯೂ ಅವರಿಬ್ಬರು ಕಂಡಿಲ್ಲ. ಆದರೆ ಕಾಣೆಯಾದ ಯುವಕ ಮತ್ತು ಸಲೋನಿ ಇಬ್ಬರೂ ಇಂದೋರ್, ಭೋಪಾಲ್ ಮತ್ತು ಉಜ್ಜಯಿನಿ ಹೀಗೆ ನಿರಂತರವಾಗಿ ಸ್ಥಳಗಳನ್ನು ಬದಲಾಯಿಸುತ್ತಿದ್ದು, ಇವರ ಪತ್ತೆಗಾಗಿ ಅನ್ನಪೂರ್ಣ ಪೊಲೀಸರ ನೆರವಿನೊಂದಿಗೆ ಹೈದರಾಬಾದ್ ಪೊಲೀಸರು ಇಂದೋರ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.

Ads on article

Advertise in articles 1

advertising articles 2

Advertise under the article