-->

ರಾಮ್ ಚರಣ್ - ಉಪಾಸನಾ ಮಗುವಿಗೆ ಮುಖೇಶ್ ಅಂಬಾನಿಯಿಂದ ಬಂಗಾರದ ತೊಟ್ಟಿಲು ಗಿಫ್ಟ್: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ

ರಾಮ್ ಚರಣ್ - ಉಪಾಸನಾ ಮಗುವಿಗೆ ಮುಖೇಶ್ ಅಂಬಾನಿಯಿಂದ ಬಂಗಾರದ ತೊಟ್ಟಿಲು ಗಿಫ್ಟ್: ಅದರ ಬೆಲೆ ಕೇಳಿದ್ರೆ ದಂಗಾಗ್ತೀರಾ


ಹೈದರಾಬಾದ್: ಟಾಲಿವುಡ್‌ನ ಮೆಗಾಸ್ಟಾರ್ ಕುಟಂಬಕ್ಕೆ ನೂತನ ಅತಿಥಿಯ ಆಗಮನವಾಗಿರುವುದು ಎಲ್ಲರಿಗೂ ಗೊತ್ತಿದೆ. ಸೂಪರ್‌ಸ್ಟಾರ್ ರಾಮ್‌ಚರಣ್ ಪತ್ನಿ ಉಪಾಸನಾ ಜೂನ್ 20ರಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವರ ಕುಟುಂಬದಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಮೊನ್ನೆಯಷ್ಟೇ ಮೆಗಾ ಕುಟುಂಬದಲ್ಲಿ ಮಗುವಿಗೆ ನಾಮಕರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಇದರ ಬೆನ್ನಲ್ಲೇ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ರಾಮಚರಣ್-ಉಪಾಸನಾ ದಂಪತಿಯ ಮಗುವಿಗೆ ದುಬಾರಿ ಉಡುಗೊರೆಯೊಂದು ನೀಡಿದ್ದಾರೆ.

ರಾಮ್‌ಚರಣ್ ಮತ್ತು ಉಪಾಸನಾ 11 ವರ್ಷಗಳ ದಾಂಪತ್ಯ ಜೀವನದಲ್ಲಿ ಮೊದಲ ಮಗು ಜನಿಸಿದೆ. ಉಪಾಸನಾ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಜೂ. 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಮಗುವಿನ ನಾಮಕರಣ ಕಾರ್ಯಕ್ರಮ ನಡೆದಿದೆ. ಮಗುವಿಗೆ 'ಕ್ಲಿಂಕಾರ ಕೊನಿಡೆಲಾ' ಎಂದು ನಾಮಕರಣ ಮಾಡಲಾಗಿದೆ. ಆ ಹೆಸರನ್ನು ಲಲಿತಾ ಸಹಸ್ರನಾಮ ನಾಮದಿಂದ ತೆಗೆದುಕೊಳ್ಳಲಾಗಿದೆಯಂತೆ. ಕ್ಲಿಂಕಾರ ಎಂಬುದು ಪ್ರಕೃತಿಯ ಸಾಕಾರವನ್ನು ಪ್ರತಿನಿಧಿಸುತ್ತದೆ ಎಂದು ಮೆಗಾ ಕುಟುಂಬ ಹೇಳಿದೆ.

ಇದೀಗ ತಾಜಾ ಸುದ್ದಿಯೊಂದು ಹೊರಬಿದ್ದಿದ್ದು, ರಾಮ್‌ಚರಣ್ ಮಗುವಿಗೆ ಮುಕೇಶ್ ಅಂಬಾನಿಯವರು ದುಬಾರಿ ಉಡುಗೊರೆ ನೀಡಿದ್ದಾರೆ. ಅವರು ಮಗುವಿಗೆ ಚಿನ್ನದ ತೊಟ್ಟಿಲು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದಂತು ಖಚಿತ. ಚಿನ್ನದ ತೊಟ್ಟಿಲಿನ ಮೌಲ್ಯ ಬರೋಬ್ಬರಿ 1 ಕೋಟಿ ರೂ. ಈಗ ಈ ಸುದ್ದಿ ಕೇಳಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರಂತೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article