ಸುರತ್ಕಲ್ ನಲ್ಲಿ ಅಪರೂಪದ ಈಲ್ ಮೀನು ಪತ್ತೆ!


ಸುರತ್ಕಲ್: ಸಮುದ್ರದ ಆಳದಲ್ಲಿ ವಾಸಿಸುವ ಕನ್ನಡ ದಲ್ಲಿ ಅರೋಳಿ ಮೀನು‌ ಎಂದು ಕರೆಯಲ್ಪಡುವ ಲಿಯೊಪೋರ್ಡ್ ಹನಿಕೋಂಬ್ ಈಲ್  ಎಂದು ಕರೆಯಲ್ಪಡುವ ಅಪರೂಪದ ಮೀನು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. 

ಮೇಲ್ನೋಟಕ್ಕೆ ಅಕ್ವೇರಿಯಂ ನಲ್ಲಿ ಸಾಕುವ ಮೀನಿನಂತೆ ಇದು  ಕಂಡುಬರುತ್ತದೆ.  ಇದು ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ವಿಷಪೂರಿತವಾಗಿರುವುದರಿಂದ ಇದನ್ನು ತಿನ್ನುವುದಿಲ್ಲ.‌ಈ ಮೀನು ಹೆಚ್ಚಾಗಿ ಕಲ್ಲು ಪ್ರದೇಶದ ಎಡೆಯಲ್ಲಿ ಇದ್ದುಕೊಂಡು ಸಣ್ಣಮೀನುಗಳನ್ನು ತಿನ್ನುತ್ತಾ  ಬದುಕುತ್ತದೆ.

ಗುಡ್ಡಕೊಪ್ಪ ಬಳಿಯ ಸಮುದ್ರ ತೀರದಲ್ಲಿ ಸುಮಾರು 4 ಅಡಿ ಉದ್ದದ ಮೀನು ಪತ್ತೆಯಾಗಿದ್ದು, ಸ್ಥಳೀಯರಾದ ಅನುಪಮ ಶಿವರಾಂ ಅವರು ಗಮನಿಸಿ ಮಾಹಿತಿ ನೀಡಿದ್ದಾರೆ