ಬೆಂಗಳೂರಿನಲ್ಲಿ ರೂಪದರ್ಶಿ ಆತ್ಮಹತ್ಯೆ- ಪ್ರಿಯಕರ ಅರೆಸ್ಟ್


ಬೆಂಗಳೂರು: ನಗರದ ಸೋಲದೇವನಹಳ್ಳಿಯ ಕೆಂಪಾಪುರದಲ್ಲಿ ರೂಪದರ್ಶಿ ವಿದ್ಯಾಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು  ಅರೆಸ್ಟ್ ಮಾಡಿದ್ದಾರೆ.

ಜುಲೈ 21ರಂದು ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಶ್ರೀ ಎಂಬುವವರು ಅಕ್ಷಯ್ ಎಂಬ ಪ್ರಿಯಕರನ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.


ಮನೆಯಲ್ಲಿ ಡೆತ್‌ನೋಟ್ ಪತ್ತೆಯಾದ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಅಕ್ಷಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರೂಪದರ್ಶಿ ಆಗಿದ್ದ ವಿದ್ಯಾಶ್ರೀ ಮತ್ತು ಅಕ್ಷಯ್ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಅಕ್ಷಯ್ ವಿದ್ಯಾ ಬಳಿ 1.76 ಲಕ್ಷ ರೂ. ಹಣ ಪಡೆದುಕೊಂಡಿದ್ದು ಅದನ್ನು ವಾಪಾಸ್ ಕೇಳಿದ್ದಕ್ಕೆ ವಿದ್ಯಾಶ್ರೀ ಮತ್ತು ಆಕೆಯ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾಶ್ರೀ ಡೆತ್‌ನೋಟ್ ಬರೆದಿಟ್ಟು ಆತ್ಮ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



99