-->
1000938341
ಏಕಾಏಕಿ ಅನಾರೋಗ್ಯಕ್ಕೀಡಾದ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಸ್ವತಃ ಬಿಎಂಟಿಸಿ ಬಸ್ ಅನ್ನು ಚಲಾಯಿಸಿದ ಎಸಿಪಿ

ಏಕಾಏಕಿ ಅನಾರೋಗ್ಯಕ್ಕೀಡಾದ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಸ್ವತಃ ಬಿಎಂಟಿಸಿ ಬಸ್ ಅನ್ನು ಚಲಾಯಿಸಿದ ಎಸಿಪಿ


ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಂಟಿಸಿ ಬಸ್ ಚಾಲಕನನ್ನು ಆ್ಯಂಬ್ಯಲೆನ್ಸ್​ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಲ್ಲದೆ, ರಸ್ತೆಯಲ್ಲಿ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಸ್ವತಃ ಚಲಾಯಿಸುವ ಮೂಲಕ ಹಲಸೂರು ಎಸಿಪಿ ರಾಮಚಂದ್ರ ಕರ್ತವ್ಯ ಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

ಶಿವಾಜಿನಗರ-ಕಾಡುಗೋಡಿ‌ ಮಾರ್ಗದ ಬಿಎಂಟಿಸಿ ಬಸ್ ಚಾಲಕ ದಾರಿಯ ನಡುವೆಯೇ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆಯ ಬಳಿ ಬಸ್​ ನಿಲ್ಲಿಸಿದ್ದಾರೆ. ಆದರೆ ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನಲೆಯಲ್ಲಿ ಓಲ್ಡ್ ಏರ್ಪೋರ್ಟ್​ ರಸ್ತೆಯಲ್ಲಿ ಎಸಿಪಿ ರಾಮಚಂದ್ರ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು. ಆದರೆ ರಸ್ತೆಯ ಮಧ್ಯೆಯೇ ನಿಂತಿದ್ದ ಬಿಎಂಟಿಸಿ ಬಸ್​ ಅನ್ನು ಗಮನಿಸಿದ ಅವರು ಬಂದು ಪರಿಶೀಲಿಸಿದ ವೇಳೆ ಚಾಲಕ ಏಕಾಏಕಿ ಅಸ್ವಸ್ಥಗೊಂಡಿದ್ದಾನೆ.

ತಕ್ಷಣ ಅವರು ಬಸ್​ ಚಾಲಕನನ್ನು ಆ್ಯಂಬ್ಯುಲೆನ್ಸ್​ ಮೂಲಕ ಬೌರಿಂಗ್ ಆಸ್ಪತ್ರೆಗೆ ಎಸಿಪಿ ರಾಮಚಂದ್ರ ರವಾನಿಸಿದ್ದಾರೆ. ಅಲ್ಲದೆ ಸುಮಾರು ಒಂದು ಕಿ.ಮೀ ದೂರದ ಬಸ್​ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿದ್ದಾರೆ. ಬಸ್​ ಚಾಲನೆ ಮಾಡಿರುವ ‌ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ‌ ವೈರಲ್​ ಆಗುತ್ತಿದ್ದು, ಪ್ರಯಾಣಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

Ads on article

Advertise in articles 1

advertising articles 2

Advertise under the article