-->
1000938341
ಸೈಕೋ ವುಮನ್ ಶ್ರುತಿ ಹಾಸನ್ ಬಾಯ್ ಫ್ರೆಂಡ್ ನೊಂದಿಗೆ ಡ್ರಗ್ಸ್ ಸೇವಿಸುತ್ತಿರುತ್ತಾರೆ

ಸೈಕೋ ವುಮನ್ ಶ್ರುತಿ ಹಾಸನ್ ಬಾಯ್ ಫ್ರೆಂಡ್ ನೊಂದಿಗೆ ಡ್ರಗ್ಸ್ ಸೇವಿಸುತ್ತಿರುತ್ತಾರೆ


ಮುಂಬೈ: ತನ್ನ ವಿವಾದಾತ್ಮಕ ಟ್ವಿಟ್ ಗಳಿಂದಲೇ ಸದಾ ಸುದ್ದಿಯಲ್ಲಿರುವ ಸ್ವಯಂಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಸೆಲೆಬ್ರಿಟಿಗಳ ಬಗ್ಗೆ ಇಲ್ಲಸಲ್ಲದ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯರಾಗಿರುವ ಉಮೈರ್ ಸಂಧು, ಕೆಲವೊಂದು ಬಾರಿ ತಮ್ಮ ಮಿತಿಯನ್ನು ದಾಟಿ ಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುತ್ತಾರೆ. ಇತ್ತೀಚೆಗೆ ಅವರು ಮಾಡುತ್ತಿರುವ ಟ್ವಿಟ್ ಎಲ್ಲರ ಗಮನಸೆಳೆಯುತ್ತಿದೆ.

ಇಷ್ಟು ದಿನಗಳ ಕಾಲ ಬಾಲಿವುಡ್ ಸ್ಟಾರ್ ನಟ - ನಟಿಯರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡುತ್ತಿದ್ದ ಮಾಡುತ್ತಿದ್ದ ಉಮೈರ್ ಸಂಧು, ಇದೀಗ ಕಮಲ್ ಹಾಸನ್ ಪುತ್ರಿ, ದಕ್ಷಿಣದ ಖ್ಯಾತ ನಟಿ ಶ್ರುತಿ ಹಾಸನ್ ಬಗ್ಗೆ ಟ್ವಿಟ್ ಮಾಡಿದ್ದಾರೆ. ಅವರ ಟ್ವಿಟ್ ಈಗ ಭಾರೀ ವೈರಲ್ ಆಗಿದೆ. 

ಶ್ರುತಿ ಹಾಸನ್ ಓರ್ವ ಸೈಕೋ ವುಮನ್. ಇತ್ತೀಚೆಗೆ ಆಗೆ ಖಿನ್ನತೆ ಶಮನಕಾರಿ (ಆಂಟಿ-ಡಿಪ್ರೆಸೆಂಟ್) ಔಷಧಿ ಸೇವಿಸುತ್ತಿದ್ದಾರೆ. ಮುಂಬೈನಲ್ಲಿ ತನ್ನ ಬಾಯ್ ಫ್ರೆಂಡ್ ನೊಂದಿಗೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ. ಸಾಕಷ್ಟು ಹತಾಶೆಗೊಳಗಾಗಿದ್ದಾರೆ. ಅದಕ್ಕಾಗಿಯೇ ಹೆಚ್ಚಿನ ನಿರ್ದೇಶಕರು ಆಕೆಯೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ. ನಿನ್ನೆ ರಾತ್ರಿ ಶ್ರುತಿ ತನ್ನ ತಂದೆ ಕಮಲ್ ಹಾಸನ್ ರೊಂದಿಗೆ ಜಗಳ ಮಾಡಿಕೊಂಡಿದ್ದರು ಎಂದು ಟ್ವಿಟ್ ಮಾಡಿದ್ದಾರೆ.

ಶ್ರುತಿ ಹಾಸನ್ ಅವರು ಶಂತನು ಹಜಾರಿಕಾರೊಂದಿಗೆ ದೀರ್ಘ ಕಾಲಗಳಿಂದ ರಿಲೇಶನ್ಶಿಪ್ ನಲ್ಲಿದ್ದಾರೆ. ಇಬ್ಬರೂ ಆಗಾಗ ಜೊತೆಯಾಗಿರುವ ಫೋಟೋಗಳನ್ನು ಶೇರ್ ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ಖುಷಿ ಪಡಿಸುತ್ತಿರುತ್ತಾರೆ. ಆದರೆ ಉಮೈರ್ ಸಂಧು ಶ್ರುತಿ ಹಾಸನ್ ಮುಂಬೈನಲ್ಲಿ ತನ್ನ ಬಾಯ್ ಫ್ರೆಂಡ್ ಜೊತೆ ನಿತ್ಯ ಡ್ರಗ್ಸ್ ಸೇವಿಸುತ್ತಿದ್ದು ನಿನ್ನೆ ರಾತ್ರಿ ತಂದೆಯೊಂದಿಗೆ ಜಗಳವಾಡಿದರು ಎಂದು ಟ್ವಿಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಶ್ರುತಿ ಹಾಸನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Ads on article

Advertise in articles 1

advertising articles 2

Advertise under the article