-->
Samsung Galaxy F54 5G ಕೇವಲ ರೂ.27,999 ಕ್ಕೆ ಲಭ್ಯ: 108MP ನೋ ಶೇಕ್ ಕ್ಯಾಮೆರಾ ಜತೆಗೆ ವಿಶೇಷ ವೈಶಿಷ್ಟ್ಯ

Samsung Galaxy F54 5G ಕೇವಲ ರೂ.27,999 ಕ್ಕೆ ಲಭ್ಯ: 108MP ನೋ ಶೇಕ್ ಕ್ಯಾಮೆರಾ ಜತೆಗೆ ವಿಶೇಷ ವೈಶಿಷ್ಟ್ಯ

  

ದಕ್ಷಿಣ ಕೊರಿಯಾ ಮೂಲದ್ದಾದರೂ, ಭಾರತದ ಮೊಬೈಲ್ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನವನ್ನು ಅಲಂಕರಿಸಿದ SAMSUNG ಹೊಸ ಹೊಸ ವಿಶೇಷ ವೈಶಿಷ್ಟಗಳೊಂದಿಗೆ ನಿರಂತರವಾಗಿ ತನ್ನ ಗ್ರಾಹಕರಿಗೆ ಉತ್ತಮ ಮೊಬೈಲ್ಗಳನ್ನು ನೀಡುತ್ತಿದೆ. ಈ ಕಂಪನಿ, ಇದೀಗ ತನ್ನ ಎಫ್ಸೀರೀಸ್ ಡಿವೈಸ್ನಲ್ಲಿ ಲೇಟೆಸ್ಟ್SAMSUNG ಗ್ಯಾಲಕ್ಸಿ ಎಫ್‌54 5ಜಿ ಸೇರಿಸಿದ್ದು, ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಡಿವೈಸ್ಅತ್ಯಂತ ಪ್ರೀಮಿಯಂ ಸೀರೀಸ್  SMARTPHONE ಆಗಿದ್ದು ವಿಶೇಷ ವೈಶಿಷ್ಟಗಳನ್ನು ಹೊಂದಿದೆ.GALAXY F54 5G ತೆಳುವಾದ ಮತ್ತು ಪ್ರೀಮಿಯಂ ಎಸ್ಥೆಟಿಕ್ಸ್ಜತೆಗೆ ಐಕಾನಿಕ್ ಗ್ಯಾಲಕ್ಸಿ ಸಿಗ್ನೇಚರ್ ಡಿಸೈನ್ಹೊಂದಿದೆ. ಅಲ್ಲದೆ ಕಣ್ಮನ ಸೆಳೆಯುವ ಡಿವೈಸ್ಇದಾಗಿದೆ. 5ಜಿ ನೆಟ್ವರ್ಕ್‌, 108MP ನೋ ಶೇಕ್ ಕ್ಯಾಮೆರಾ, ಫ್ಲ್ಯಾಗ್ಶಿಪ್ಕ್ಯಾಮೆರಾ ಫೀಚರ್ ಗಳಾದ ಆಸ್ಟ್ರೋಲ್ಯಾಪ್ಸ್ಮತ್ತು ನೈಟೋಗ್ರಫಿ, 6000 mAh ಬ್ಯಾಟರಿ ಸಾಮರ್ಥ್ಯ, ಸೂಪರ್ ಅಮೋಲ್ಡ್‌+120Hz ಡಿಸ್ಪ್ಲೇ ನಂತಹ ಫೀಚರ್ಗಳನ್ನು ಹೊಂದಿರುವ SAMSUNG ಎಫ್‌54 ಗ್ರಾಹಕರ ಟಾಪ್ಆಯ್ಕೆಯ ಸ್ಮಾರ್ಟ್ಫೋನ್.


FLIPKART ಹಿರಿಯ ಉಪಾಧ್ಯಕ್ಷ ಅಜಯ್ ವೀರ್ ಯಾದವ್, 'ಇಂದಿನ ತಂತ್ರಜ್ಞಾನ - ಪ್ರಥಮ ಜಗತ್ತಿನಲ್ಲಿ ಲೇಟೆಸ್ಟ್ಟೆಕ್ನಾಲಜಿಗೆ UPGRADE ಆಗುವುದು ಕೇವಲ ಆಧ್ಯತೆ ಅಲ್ಲದೇ ಹಲವರಿಗೆ ಅಗತ್ಯವು ಆಗಿದೆ. ಪ್ರೀಮಿಯಂ ಸ್ಮಾರ್ಟ್ಫೋನ್ಸೀರೀಸ್ನಲ್ಲಿ ಇದು ನಿಜವಾಗಿದ್ದು, ಇಲ್ಲಿ ಗ್ರಾಹಕರು ಸದಾ ಹೈ-ಎಂಡ್ ಕ್ಯಾಮೆರಾಗಳೊಂದಿಗೆ ಅತ್ಯಾಧುನಿಕ ಡಿವೈಸ್ಗಳು ಮತ್ತು ದೀರ್ಘ ಬ್ಯಾಟರಿ ಬಾಳಿಕೆಯನ್ನು ನಿರೀಕ್ಷಿಸುತ್ತಾರೆ. ಫ್ಲಿಪ್ಕಾರ್ಟ್ನಲ್ಲಿ ನಾವು ಭಾರತದಾದ್ಯಂತ ಅತ್ಯುತ್ತಮ ಮತ್ತು ಅತ್ಯಂತ ಪ್ರಸ್ತುತ ಉತ್ಪನ್ನಗಳನ್ನು ಪ್ರತಿ ಗ್ರಾಹಕರಿಗೂ ಲಭ್ಯವಾಗುವಂತೆ ಮಾಡುವುದರಲ್ಲಿ ನಂಬಿಕೆ ಇರಿಸಿಕೊಂಡಿದ್ದೇವೆ ಮತ್ತು ಅತ್ಯಂತ ನಿರೀಕ್ಷೆಯ SAMSUNG ಗ್ಯಾಲಕ್ಸಿ ಎಫ್‌54 5G ಬಿಡುಗಡೆ ಮೂಲಕ ಪ್ರೀಮಿಯಂ ವಲಯದಲ್ಲಿ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತಿದ್ದೇವೆ" ಎಂದಿದ್ದಾರೆ.

ಕ್ಯಾಮೆರಾ ಫೀಚರ್ಗಳು
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್‌54 5G ಗ್ರಾಹಕರನ್ನು ತನ್ನ ಕ್ಯಾಮೆರಾ ಫೀಚರ್ಮೂಲಕವೇ ಹೆಚ್ಚು ಸೆಳೆತಕ್ಕೊಳಗಾಗಿದೆ ಎಂದರೆ ತಪ್ಪಾಗಲಾರದು. ಕಾರಣ ಇದು ಶಕ್ತಿಯುತ 108MP (ಒಐಎಸ್) ನೋ ಶೇಕ್ ಕ್ಯಾಮೆರಾದೊಂದಿಗೆ 8 MP ಅಲ್ಟ್ರಾ-ವೈಡ್ ಲೆನ್ಸ್‌, 2 MP ಮ್ಯಾಕ್ರೋ ಲೆನ್ಸ್ಮತ್ತು 32ಎಂಪಿ ಸೆಲ್ಫೀ ಕ್ಯಾಮೆರಾ ವೈಶಿಷ್ಟಗಳನ್ನು ಹೊಂದಿದೆ.ನೈಟೋಗ್ರಫಿ ಫೀಚರ್ ಫ್ಲ್ಯಾಗ್ಶಿಪ್ಸೀರೀಸ್ ಅತ್ಯಂತ ಪ್ರೀತಿಪಾತ್ರ ವೈಶಿಷ್ಟ. ರಾತ್ರಿ ವೇಳೆಯಲ್ಲಿ ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಸುಂದರವಾದ ಮನಮೋಹಕ ಚಿತ್ರಗಳನ್ನು ಸೆರೆ ಹಿಡಿಯಬಹುದು. ಇದು ಹೆಚ್ಚಿನ ಪಿಕ್ಸೆಲ್ನಿಂದ ರಚಿತವಾಗಿದ್ದು, ಅದಕ್ಕೆ ನೋನಾ-ಬಿನ್ನಿಂಗ್ ತಂತ್ರಜ್ಞಾನ ಕಾರಣವಾಗಿದೆ. ಇದೇ ಹೆಚ್ಚು ಬೆಳಕು ನೀಡಿ ಉತ್ತಮ ಫೋಟೋ ಸೆರೆಹಿಡಿಯಲು ಕಾರಣವಾಗಿದೆ. ಡಿವೈಸ್ ಹೆಚ್ಚು ನೈಟ್ಮೋಡ್ಅಲ್ಲದೆ AUTO ನೈಟ್ ಮೋಡ್ಮತ್ತು AI ಆಧರಿತ ಮಲ್ಟಿ ಫ್ರೇಮ್ ಪ್ರೊಸೆಸಿಂಗ್ ಮೂಲಕ 12ಫ್ರೇಮ್ಗಳವರೆಗೆ ಅದ್ಭುತ ಫೋಟೋ ತೆಗೆಯಬಹುದು.

NO
ಶೇಕ್ ಕ್ಯಾಮೆರಾ
ಇದು ಸ್ಪಷ್ಟ ಹಾಗೂ ಸ್ಥಿರ ನೈಟ್ವಿಡಿಯೋ ಸೆರೆಹಿಡಿಯಲು, ಡ್ಯುಯಲ್ ಟ್ರ್ಯಾಕ್ ಇಮೇಜ್ ಸ್ಟೆಬಿಲೈಜೇಷನ್ ಅನ್ನು OIS ಮತ್ತು VDIS ನೊಂದಿಗೆ ಹೊಂದಿದೆ. ಇದರ ಮೂಲಕ ಕ್ಯಾಮೆರಾ ಅಲುಗಾಡಿದರೂ ಸಹ ಸ್ಪಷ್ಟ ಚಿತ್ರೀಕರಣ ಸಾಧ್ಯವಾಗುತ್ತದೆ. VDIS ಕ್ಯಾಮೆರಾ ಚಲನೆಗಳಿಗೆ ಬದಲಿಗೆ ಸಾಫ್ಟ್ವೇರ್ ಬಳಸುತ್ತದೆ ಮತ್ತು 1 ಕಿಲೋಹರ್ಟ್ಸ್ಮೋಷನ್ ಸ್ಯಾಂಪ್ಲಿಂಗ್ ಫ್ರೀಕ್ವೆನ್ಸಿ ನೀಡುವ ಮೂಲಕ ವೇಗದ ಮತ್ತು ನಿಖರವಾದ ಮ್ಯಾಗ್ನಿಟ್ಯೂಡ್ ಮತ್ತು ಡೈರೆಕ್ಟನಲ್ ಅನಾಲಿಸಿಸ್ ನೀಡುತ್ತದೆ.ಕ್ಯಾಮೆರಾದ ಇತರೆ ವೈಶಿಷ್ಟಗಳ ಪೈಕಿ SAMSUNG ಫ್ಲ್ಯಾಗ್ಶಿಪ್ ಆಸ್ಟ್ರೊಲ್ಯಾಪ್ಸ್ವಿಶೇಷತೆಯೊಂದಿಗೆ ಬಂದಿದ್ದು, ಬಳಕೆದಾರರಿಗೆ ರಾತ್ರಿ ಆಕಾಶದ ಟೈಮ್ಲ್ಯಾಪ್ಸ್ವಿಡಿಯೋಗಳನ್ನು ಸೆರೆಹಿಡಿಯಲು ಅವಕಾಶವನ್ನು ನೀಡುತ್ತದೆ. ಇದು ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ಗಳಿಗೆ ಹೊಸ ಮಟ್ಟದ ಸೃಜನಶೀಲನೆಯನ್ನು ನೀಡಲಿದೆ.

ULTRA HD , 4ಕೆ ವಿಡಿಯೋ ರೆಕಾರ್ಡಿಂಗ್ ಅನ್ನು ಪ್ರತಿ ಸೆಕೆಂಡಿಗೆ 30 ಫ್ರೇಮ್ ಗಳಲ್ಲಿ ಹಾಗೂ ಸೆಲ್ಫೀ ಕ್ಯಾಮೆರಾ ಎರಡರಲ್ಲೂ ನೀಡುತ್ತದೆ. ಗ್ಯಾಲಕ್ಸಿ ಎಫ್‌54 5ಜಿ ಇತರೆ ಕ್ರಾಂತಿಕಾರಕ ಕ್ಯಾಮೆರಾ ವಿಶೇಷತೆಗಳೊಂದಿಗೆ ಬಂದಿದ್ದು ಅದರಲ್ಲಿ ಸಿಂಗಲ್ ಟೇಕ್ ಒಂದೇ ಶಾಟ್ ನಲ್ಲಿ ಅಲ್ಲದೆ ಫನ್ ಮೋಡ್ನಲ್ಲಿ ನೀಡುತ್ತದೆ.ಡಿಸ್ಪ್ಲೇ ಫೀಚರ್ ವಿಶೇಷತೆ
ಇದರ ವಿನ್ಯಾಸ ಹೆಚ್ಚು ಮುಂಚೂಣಿಯಲ್ಲಿದ್ದು, ಅತ್ಯಾಧುನಿಕತೆಯನ್ನು ಬಿಂಬಿಸಲಿದೆ. ಹಿಡಿತಕ್ಕೆ ಅನುಕೂಲಕರವು ಆಗಿದೆ, ತಡೆರಹಿತ ಬಳಕೆದಾರರ ಅನುಭವ ನೀಡುತ್ತದೆ. ಇದು ಪ್ರತಿಯೊಬ್ಬರ ಸ್ಟೈಲ್ಗೆ ಹೊಂದುವ ಆಯ್ಕೆಯ ಬಣ್ಣಗಳನ್ನು ಒದಗಿಸಲಿದೆ.

ಇತರೆ ವಿಶೇಷ ಹಾಗೂ ಪ್ರಮುಖ ಫೀಚರ್ಗಳು
SAMSUNG ಗ್ಯಾಲಕ್ಸಿ ಎಫ್‌54 5ಜಿ ವಾಯ್ಸ್ಫೋಕಸ್, VIDEO ಕರೆಗಳಲ್ಲಿ ಸುತ್ತಲಿನ ಶಬ್ಧ ಕಡಿಮೆ ಮಾಡುವ ಫೀಚರ್ ಹೊಂದಿದೆ. 6000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು ದೀರ್ಘಕಾಲ ಬಳಕೆಗೆ ಉತ್ತಮ. 25W ಸೂಪರ್ ಫಾಸ್ಟ್ಚಾರ್ಜಿಂಗ್ ಫೀಚರ್ಹೊಂದಿದೆ.

ಎಕ್ಸಿನೊಸ್ 1380 5nm PROCESSOR ಮೂಲಕ ನಿರಂತರ ವೇಗವಾಗಿ ಮಲ್ಟಿಟಾಸ್ಕ್ಗಳನ್ನು ನಿರ್ವಹಿಸಲು ಸಹಾಯಕವಾಗಿದೆ.

SAMSUNG ಗ್ಯಾಲಕ್ಸಿ ಎಫ್‌54 5ಜಿ ಮೀಟಿಯೋರ್ ಬ್ಲೂ ಮತ್ತು ಸ್ಟಾರ್ಡಸ್ಟ್ಸಿಲ್ವರ್ ಬಣ್ಣಗಳಲ್ಲಿ ಲಭ್ಯ. ಇದು 8+256GB ಸ್ಟೋರೇಜ್ಸಾಮರ್ಥ್ಯವನ್ನು ಹೊಂದಿದೆ. ಇದು ಫ್ಲಿಪ್ಕಾರ್ಟ್ಹಾಗೂSAMSUNG.COM, ಕೆಲವು ಆಯ್ಕೆಯ ರೀಟೇಲ್ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯ. ಪ್ರಸ್ತುತ ಪ್ರಾರಂಭಿಕ ಕೊಡುಗೆಯಾಗಿ ಕೆಲವು ಆಯ್ದ ಬ್ಯಾಂಕ್ಕಾರ್ಡ್ಗಳ ಮೂಲಕ ಖರೀದಿಸಿದಲ್ಲಿ ರೂ.27,999 ಕ್ಕೆ ದೊರೆಯುತ್ತದೆ. ಗ್ರಾಹಕರು ಸ್ಮಾರ್ಟ್ಫೋನ್ಖರೀದಿಸುವ ಮೂಲಕ ಅತ್ಯಾಕರ್ಷಕ ನೊ ಕಾಸ್ಟ್EMI ಆಫರ್ಅನ್ನು ಸಹ ಪಡೆಯಬಹುದಾಗಿದೆ.

 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article