-->
ಲೀವ್ ಇನ್ ಸಂಗಾತಿಯ ಕೊಲೆ: ಮೃತದೇಹವನ್ನು ಮರ ಕಟ್ ಮಾಡುವ ಮಿಷಿನ್ ನಿಂದ ತುಂಡರಿಸಿ, ಕುಕ್ಕರ್ ನಲ್ಲಿ ಬೇಯಿಸಿದ ಕಟುಕ

ಲೀವ್ ಇನ್ ಸಂಗಾತಿಯ ಕೊಲೆ: ಮೃತದೇಹವನ್ನು ಮರ ಕಟ್ ಮಾಡುವ ಮಿಷಿನ್ ನಿಂದ ತುಂಡರಿಸಿ, ಕುಕ್ಕರ್ ನಲ್ಲಿ ಬೇಯಿಸಿದ ಕಟುಕ


ಮುಂಬಯಿ: ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆಯ ಬಳಿಕ ದೇಶದಲ್ಲಿ ಅಂಥಹದ್ದೇ ಭೀಕರ ಹತ್ಯಾ ಪ್ರಕರಣಗಳು ನಡೆಯುವುದು ಹೆಚ್ಚಾಗುತ್ತಿದೆ. ಇದೀಗ ಅಂತಹದ್ದೇ ಮತ್ತೊಂದು ಭೀಭತ್ಸ ಹತ್ಯಾಪ್ರಕರಣ ಮುಂಬಯಿಯಲ್ಲಿ ನಡೆದಿದೆ. ಇಲ್ಲಿ ಕಟುಕ ಮನಸ್ಥಿತಿಯ ವ್ಯಕ್ತಿಯೋರ್ವನು ತನ್ನ ಲಿವ್-ಇನ್ ರಿಲೇಷನ್ ಶಿಪ್ ಸಂಗಾತಿಯನ್ನು ಹತ್ಯೆಗೈದು, ದೇಹದ ಭಾಗವನ್ನು ತುಂಡರಿಸಿ ಅದನ್ನು ಕುಕ್ಕರ್ ನಲ್ಲಿ ಬೇಯಿಸಿದ್ದಾನೆಂದು ತಿಳಿದು ಬಂದಿದೆ.

ಮನೋಜ್ ಸಹಾನಿ (56) ಎಂಬಾತ ಬೋರಿವಾಲಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾನೆ. ಈತ ಕಳೆದ ಮೂರು ವರ್ಷಗಳಿಂದ ಗೀತಾ ನಗರ 7ನೇ ಹಂತದ ಗೀತಾ ಆಕಾಶ್ ದೀಪ್ ಫ್ಲಾಟ್‌ನಲ್ಲಿ ಸರಸ್ವತಿ ವೈದ್ಯ (32) ಎಂಬವರೊಂದಿಗೆ ವಾಸವಾಗಿದ್ದಾನೆ. ಇವರಿಬ್ಬರೂ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಆದರೆ ಜೂ.7 ರಂದು ಫ್ಲಾಟ್ ನ ಇತರೆ ಮನೆಗಳ ವಾಸಿಗಳು ಮನೋಜ್ ಮನೆಯೊಳಗಡೆಯಿಂದ ಕೆಟ್ಟ ವಾಸನೆ ಬರುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ 3-4 ದಿನಗಳ ಹಿಂದೆ ಹತ್ಯೆಯಾಗಿರುವ ಮಹಿಳೆಯೊಬ್ಬರ ದೇಹದ ಭಾಗಗಳು ಕುಕ್ಕರ್ ನಲ್ಲಿ ಬೇಯುತ್ತಿರುವುದನ್ನು ಪೊಲೀಸರು ನೋಡಿದ್ದಾರೆ.

ಮನೋಜ್ ಸಹಾನಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಸರಸ್ವತಿ ವೈದ್ಯರೊಂದಿಗೆ ಜಗಳವಾಗಿದೆ. ಇದೇ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು. ಆ ಬಳಿಕ ಆಕೆಯ ದೇಹವನ್ನು ಮರ ತುಂಡರಿಸುವ ಮಿಷನ್ ನಿಂದ ತುಂಡು ಮಾಡಿದ್ದಾನೆ. ಪೊಲೀಸರು ಮನೆಗೆ ತಲುಪಿ ಬಾಗಿಲು ತೆರೆದಾಗ, ಇದು ಕೊಲೆಯ ಪ್ರಕರಣ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮನೆಯೊಳಗೆ ಕತ್ತರಿಸಿದ ದೇಹದ ತುಣುಕುಗಳ ಪತ್ತೆಯಾಗಿವೆ. ಬಹುಶಃ ಕೊಲೆ ಮಾಡಿ ಮೂರ್ನಾಲ್ಕು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಶಂಕಿತ ಆರೋಪಿ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಜಲೆ ಹೇಳಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article