ನಿಗಮ, ಮಂಡಳಿಯಲ್ಲಿ ಉದ್ಯೋಗಾವಕಾಶ: FDA, SDA ಸಹಿತ ಹಲವು ಹುದ್ದೆಗಳಿಗೆ ನೇಮಕಾತಿ!

ನಿಗಮ, ಮಂಡಳಿಯಲ್ಲಿ ಉದ್ಯೋಗಾವಕಾಶ: FDA, SDA ಸಹಿತ ಹಲವು ಹುದ್ದೆಗಳಿಗೆ ನೇಮಕಾತಿ!





ಕರ್ನಾಟಕ ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಸೇರಲು ಆಸಕ್ತ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ.


ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ.



ಪ್ರಮುಖ ನಿಗಮ ಮಂಡಳಿಗಳು:

ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ - 386

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ - 186

ರಾಜ್ಯ ವಿದ್ಯುನ್ಮಾನ ಮಂಡಳಿ - 26

ಎಂಎಸ್‌ಐಎಲ್‌- 72


ಹುದ್ದೆಗಳ ವಿವರ:

ಸಹಾಯಕ ವ್ಯವಸ್ಥಾಪಕರು

ತಾಂತ್ರಿಕ ಸಹಾಯಕ ವ್ಯವಸ್ಥಾಪಕರು

ತಾಂತ್ರಿಕೇತರ ಸಹಾಯಕ ವ್ಯವಸ್ಥಾಪಕರು

ಗುಣಮಟ್ಟ ನಿರೀಕ್ಷಕರು

ಆಪ್ತ ಕಾರ್ಯದರ್ಶಿ

ಕಲ್ಯಾಣ ಅಧಿಕಾರಿ

ಕ್ಷೇತ್ರ ನಿರೀಕ್ಷಕ

ಎಫ್‌ಡಿಎ

ಎಸ್‌ಡಿಎ

ಮಾರಾಟ ಪ್ರತಿನಿಧಿ

ಸೇಲ್ಸ್ ಎಂಜಿನಿಯರ್

ಗುಮಾಸ್ತ


ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬಹುದು. ಪ್ರತಿ ಹುದ್ದೆಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 22, 2023

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ನೀಡಿ..