ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಮಂಗಳೂರಿನ ಸಂತರು- ಉಪವಾಸ ಸತ್ಯಾಗ್ರಹದ ಎಚ್ಚರಿಕೆ
Friday, June 30, 2023
ಮಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ದ ಮಂಗಳೂರಿನ ಸಂತರು ಸಿಡಿದೆದ್ದಿದ್ದು ಹಿಂದೂ ವಿರೋಧಿ ನಡೆ ಕೈ ಬಿಡದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸ್ವಾಮೀಜಿಗಳ ಧರ್ಮ ಸಭೆ ಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಮಂಗಳೂರಿನ ಬಾಳಂಭಟ್ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದಮ ಮಧ್ಯಾಹ್ನ 1 ಗಂಟೆಯವರೆಗೆ ಧರ್ಮ ಸಭೆ ನಡೆದಿದೆ. ಈ ಸಭೆಯಲ್ಲಿ ಕರಾವಳಿಯ ಸಂತ ಸಮೂಹದಿಂದ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ.ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ಕಾಯ್ದೆ ವಾಪಾಸ್ ನಿರ್ಧಾರ ಕೈ ಬಿಡಲು ಸಂತರು ಆಗ್ರಹಿಸಿದ್ದಾರೆ.
ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲ ಸ್ವಾಮೀಜಿ ಸೇರಿ, ಚಿಲಬಿ ಓಂ ಶ್ರೀ ಮಠ , ಚಿತ್ರಾಪುರ ಮಠದ ಸ್ವಾಮೀಜಿ, ಕೊಂಡೆವೂರು ಮಠದ ಸ್ವಾಮೀಜಿ ಹಾಗೂ ವಿಎಚ್ ಪಿ, ಭಜರಂಗದಳ ಹಾಗೂ ಆರ್.ಎಸ್.ಎಸ್ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಬಳಿಕ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಒಡಿಯೂರು ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯಬಾರದು ಎಂದು ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ. ಕಾಯ್ದೆ ವಾಪಾಸ್ ಪಡೆದರೆ ಸಮಾಜದಲ್ಲಿ ಸಂಘರ್ಷ ಆಗಬಹುದು.ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ರದ್ದತಿ ನಿರ್ಧರಿಸುವುದು ಖಂಡನೀಯ ಎಂದರು.
ಈ ನಿರ್ಣಯ ಹಿಂದೂ ವಿರೋಧಿಯಾಗಿದ್ದು, ಇದರ ವಿರುದ್ದ ಹೋರಾಟ ಮಾಡಲಾಗುವುದು. ನಿರ್ಧಾರ ವಾಪಾಸ್ ಪಡೆಯದೇ ಇದ್ದರೆ ಸಂತರಿಂದ ಹೋರಾಟದ ನಿರ್ಧಾರ ಮಾಡಲಾಗುತ್ತದೆ.ಅದಕ್ಕೂ ಬಗ್ಗದೇ ಇದ್ದರೆ ಸಂತರು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಕಾಯ್ದೆ ವಾಪಾಸ್ ಪಡೆಯಲ್ಲ ಎಂಬ ವಿಶ್ವಾಸವಿದೆ, ಇಲ್ಲದೇ ಇದ್ರೆ ಉಪವಾಸ ನಿಶ್ಚಿತ ಎಂದು ತಿಳಿಸಿದರು.
ಸಂತರು ಉಪವಾಸ ಮಾಡಿದರೆ ಹಿಂದೂ ಸಮಾಜ ಎದ್ದೇಳಲಿದೆ.ಅದಕ್ಕೆ ಸರ್ಕಾರ ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ನಿರ್ಧಾರ ವಾಪಾಸ್ ಪಡೆಯಬೇಕು.ರಾಜ್ಯದ ಶಾಂತಿ ಐಕ್ಯತೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದರು.
ಆ್ಯಂಟಿ ಕಮ್ಯೂನಲ್ ವಿಂಗ್ ಮೂಲಕ ಹಿಂದೂ ಯುವಕರ ಹತ್ತಿಕ್ಕುವ ಪ್ರಯತ್ನವನ್ನು ಸರಕಾರ ಮಾಡುತ್ತಾ ಇದೆ.ಹಿಂದೂ ಯುವಕರನ್ನ ಗಡಿಪಾರು ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ.ಹೀಗಾಗಿ ನಮ್ಮ ಸಂತ ಸಮುದಾಯ ತೀವ್ರ ಹೋರಾಟದ ನಿರ್ಣಯಕ್ಕೆ ಬಂದಿದೆ. ಸಪ್ಟೆಂಬರ್ ಹತ್ತರ ನಂತರ ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು .ಆ ಬಳಿಕ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಿ ಭೇಟಿಗೂ ನಿರ್ಧರಿಸಲಾಗಿದೆ ಎಂದರು.