ಸಂಚಾರದಲ್ಲಿದ್ದ ಕಾರು ಮೇಲೆ ಬಿದ್ದ ಜಾಹಿರಾತು ಫಲಕ: ತಾಯಿ - ಮಗಳು ದಾರುಣ ಸಾವು


ಲಕ್ನೋ: ಸಂಚಾರದಲ್ಲಿ ಕಾರಿನ ಮೇಲೆ ಬೃಹತ್ ಗಾತ್ರದ ಜಾಹೀರಾತು ಫಲಕ ಬಿದ್ದು ತಾಯಿ ಹಾಗೂ ಪುತ್ರಿ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಪ್ರೀತಿ ಜಗ್ಗಿ(38) ಹಾಗೂ ಏಂಜಲ್(15) ಮೃತಪಟ್ಟ ದುರ್ದೈವಿಗಳು. ಕಾರಿನ ಡ್ರೈವರ್ ಸರ್ತಾಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸರು, ತಾಯಿ ಹಾಗೂ ಪುತ್ರಿ ಮಾಲ್‌ಗೆ ಹೋಗುತ್ತಿದ್ದರು. ಈ ವೇಳೆ ಏಕಾನಾ ಸ್ಟೇಡಿಯಂ ಬಳಿ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಎಸ್ಎಯುವಿ ಮೇಲೆ ಬಿದ್ದು ಈ ಭೀಕರ ಅಪಘಾತ ಸಂಭವಿಸಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.