-->
ಪ್ರಥಮರಾತ್ರಿಯಂದೇ ನವಜೋಡಿ ಹೃದಯಾಘಾತದಿಂದ ಸಾವು: ಉತ್ತರಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ಪ್ರಥಮರಾತ್ರಿಯಂದೇ ನವಜೋಡಿ ಹೃದಯಾಘಾತದಿಂದ ಸಾವು: ಉತ್ತರಪ್ರದೇಶದಲ್ಲೊಂದು ಆಘಾತಕಾರಿ ಘಟನೆ

ಉತ್ತರಪ್ರದೇಶ: ಇಲ್ಲಿನ ಬಹ್ಮಚ್ ಜಿಲ್ಲೆಯಲ್ಲಿ ನವವಿವಾಹಿತ ಜೋಡಿಯೊಂದು ಮದುವೆಯ ಪ್ರಥಮರಾತ್ರಿಯೇ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರಿಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ.

ಪ್ರತಾಪ್ ಯಾದವ್(22), ಪುಷ್ಪಾ (20) ಮೃತದಂಪತಿ. 

ಮೇ 30ರಂದು ಪ್ರತಾಪ್ ಯಾದವ್ ಹಾಗೂ ಪುಷ್ಪಾ ಜೋಡಿಯ ಮದುವೆ ನಡೆದಿತ್ತು. ಮದುವೆಯಾದ ಪ್ರಥಮರಾತ್ರಿಯಂದು ನವಜೋಡಿಯು ತಮ್ಮ ಕೋಣೆಗೆ ಹೋಗಿದ್ದಾರೆ. ಮರುದಿನ ಬೆಳಗ್ಗೆ ನೋಡಿದರೆ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು, ಮರಣೋತ್ತರ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ನವದಂಪತಿ ಪ್ರತಾಪ್ ಮತ್ತು ಪುಷ್ಪಾ ಅಂತ್ಯಕ್ರಿಯೆಯನ್ನು ಪ್ರತಾಪ್ ಅವರ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಒಂದೇ ಚಿತಾಗಾರದಲ್ಲಿ ನೆರವೇರಿಸಲಾಗಿದೆ. ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article