-->
ವಿವಾಹವಾಗಿ ಇಸ್ಲಾಂಧರ್ಮಕ್ಕೆ ಮತಾಂತರಗೊಂಡ ನಟಿ ಗೆಹನಾ ವಶಿಷ್ಠ

ವಿವಾಹವಾಗಿ ಇಸ್ಲಾಂಧರ್ಮಕ್ಕೆ ಮತಾಂತರಗೊಂಡ ನಟಿ ಗೆಹನಾ ವಶಿಷ್ಠಮುಂಬೈ: ನಟಿ ಗೆಹನಾ ವಸಿಷ್ಠ ತಮ್ಮ ಬಹುಕಾಲದ ಗೆಳೆಯ ಫೈಜನ್ ಅನ್ಸಾರಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಮದುವೆಗಾಗಿ ಆಕೆ ಮತಾಂತರಗೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಛತ್ತೀಸ್‌ಗಡದವರಾದ ಗೆಹನಾ ವಸಿಷ್ಠಾರ ಮೂಲ ಹೆಸರು ವಂದನಾ ತಿವಾರಿ. ನಟಿ ಗಹನಾ ಅವರದ್ದು ಅಂತರ್ಧರ್ಮೀಯ ವಿವಾಹ. ತಮ್ಮ ಪ್ರಿಯಕರ ಫೈಜಲ್ ಅನ್ಸಾರಿಯೊಂದಿಗೆ ಮದುವೆಯಾಗಿದ್ದಾರೆ. ಅಲ್ಲದೇ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಮುಸ್ಲಿಂ ಸಂಪ್ರದಾಯದ ರೀತಿಯಲ್ಲೇ ಮದುವೆ ನಡೆದಿದೆ. ನಿಖಾ ಸಮಾರಂಭದ ಫೋಟೋಗಳು ಕೂಡ ವೈರಲ್ ಆಗಿವೆ. ಗೆಹನಾ ವಸಿಷ್ಠ ಮತ್ತು ಫೈಜನ್ ಅನ್ಸಾರಿಯ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಲಾಗುತ್ತಿದೆ.

ಫೈಜಲ್ ಅನ್ಸಾರಿ ಮತ್ತು ಗೆಹನಾ ವಸಿಷ್ಠ ಬಹುಕಾಲದಿಂದ ಪ್ರೀತಿಯಲ್ಲಿದ್ದರು. ಮದುವೆಯ ಕಾರಣಕ್ಕೆ ಅವರು ಮತಾಂತರ ಆಗಿಲ್ಲ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾ ಇನ್‌ಫ್ರಯನ್ಸರ್ ಆಗಿ ಫೈಜನ್ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.

ಗೆಹನಾ ವಶಿಷ್ಠ ಅವರು ಹಲವಾರು ಜಾಹಿರಾತುಗಳಲ್ಲಿ ಹಿಂದೆ ಹಾಗೂ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ನಾಯಕಿಯಾಗಿ ಅಲ್ಲದೆ ಐಟಂ ಡ್ಯಾನ್ಸರ್ ಆಗಿಯೂ ಕಾಣಿಸಿಕೊಂಡು ಪ್ರಖ್ಯಾತರಾಗಿದ್ದಾರೆ. ರಾಜ್ ಕುಂದ್ರಾ ಅವರ ಅಶ್ಲೀಲ ಸಿನಿಮಾ ನಿರ್ಮಾಣ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಗೆಹನಾ ಬಳಿಕ ಜಾಮೀನು ಒಡೆದು ಹೊರಬಂದಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article