ಪುರುಷ, ಮಹಿಳಾ ಡ್ರೈವರ್ಸ್ ಹುದ್ದೆಗೆ ಅರ್ಜಿ ಆಹ್ವಾನ- ಸಂಬಳ ರೂ 1 ಲಕ್ಷ !

ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್ ದೇಶದಲ್ಲಿ ಡ್ರೈವರ್ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಭಾರೀ ಟ್ರಕ್ ಹಾಗೂ ಟೈಲರ್ ಡ್ರೈವಿಂಗ್ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.  ಜೂನ್ 11 ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವಾ ಮಾರುಕಟ್ಟೆ ಕಟ್ಟಡದ  ಎರಡ ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಇದೇ ಜೂನ್ 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರೂ.ಗಳಿಂದ 1,34,000 ರೂ.ಗಳು (1200-1500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ  ನೀಡಲಾಗುವುದು ಹಾಗೂ ಇಂಗ್ಲೀಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.
     ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊ.ಸಂಖ್ಯೆ 911024845, 9141584259ಗೆ ಕರೆ ಮಾಡಿ ಸಂರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

--

ಡಿ.ಎಲ್.ಇಡಿ, ಡಿ.ಪಿ.ಇಡಿ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಮಂಗಳೂರು: 2023-24ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗೆ ಆನ್ಲೈನ್  ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
        ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ www.schooleducation.kar.nic.in ನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಿ ಸಂಬಂಧಿಸಿದ ಡಯಟ್ಗಳಿಗೆ ಸಲ್ಲಿಸುವುದು. ದಾಖಲಾತಿ ಅರ್ಜಿಗಳನ್ನು ಜೂ. 26 ರೊಳಗೆ ಸಲ್ಲಿಸಬಹುದು.

      ಹೆಚ್ಚಿನ ಮಾಹಿತಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಜೈಲ್ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಕಚೇರಿ ಅಥವಾ ದೂ.ಸಂಖ್ಯೆ: 080-22483140, 080-22483145 ಹಾಗೂ 0824-2493052, ಮೊಬೈಲ್ ಸಂಖ್ಯೆ: 9449016325 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಹಾಗೂ ಪದನಿಮಿತ್ತ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.