ವರದಕ್ಷಿಣೆಯಾಗಿ ದುಬಾರಿ ಬೈಕ್ ಕೇಳಿದ ವರನಿಗೆ ಮದುವೆ ಮಂಟಪದಲ್ಲಿಯೇ ಮಾವನಿಂದ ಚಪ್ಪಲಿ‌ ಏಟು..!



ನವದೆಹಲಿ: ವರದಕ್ಷಿಣೆಯಾಗಿ ಬೈಕ್ ಕೊಡಿಸುವಂತೆ ಬೇಡಿಕೆಯಿಟ್ಟ ವರನಿಗೆ ಮಾವನೇ ಮದುವೆ ಮಂಟಪದಲ್ಲಿ ಚಪ್ಪಲಿ ಏಟು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ಒಳ್ಳೆಯ ಕಾರಣಕ್ಕಾಗಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

ವರ ವಿವಾಹವಾದ ದಿನದಂದೇ ಭಾರೀ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಈತ ದುಬಾರಿ ಬೈಕ್‌ ಕೊಡಿಸುವಂತೆ ಬೇಡಿಕೆ ಇಟ್ಟಿದ್ದ. ವರನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಲಾಯಿತು. ಆದರೆ ಆತ ತನ್ನ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ವಧುವಿನ ತಂದೆ ಮದುವೆ ಮಂಟಪದಲ್ಲಿಯೇ ಚಪ್ಪಲಿ ಸೇವೆ ಮಾಡಿದ್ದಾರೆ. ಈ ವೇಳೆ ಮದುವೆ ಮಂಟಪದಲ್ಲಿ ಭಾರಿ ಗೊಂದಲ ಏರ್ಪಟ್ಟಿತ್ತು.


ಕದನ ವಿರಾಮದ ಬಳಿಕ ವಧುವಿನ ತಂದೆ ತನ್ನ ಪುತ್ರಿಯನ್ನು ಸಂತೋಷವಾಗಿ ಇರಿಸಿಕೊಳ್ಳುವಂತೆ ವರನಿಗೆ ಹೇಳಿದನು. ಒಂದು ವೇಳೆ ಚೆನ್ನಾಗಿ ನೋಡಿಕೊಳ್ಳದಿದ್ದರೆ, ಇನ್ನಷ್ಟು ಕಪಾಳಮೋಕ್ಷ ಮಾಡುವುದಾಗಿ ಎಚ್ಚರಿಸಿದರು. ವಧುವಿನ ತಂದೆಗೆ ಹೆದರಿದ ವರ, ಮಾವನ ಮಾತಿಗೆ ಬದ್ಧನಾಗಿರಲು ನಿರ್ಧರಿಸಿದ್ದಾರೆ. ಇದಾದ ಬಳಿಕ ಮದುವೆ ಮಂಟಪದಲ್ಲಿ ಮತ್ತೆ ಮಂತ್ರಘೋಷಗಳು ಮೊಳಗಿದೆ.
BREAKING NEWS
Loading latest news...
Join our WhatsApp Channel Powered By : Online Pudu