-->
ಅಳುತ್ತಲೇ ಪತಿಯ ಮೃತದೇಹದ ಮುಂದೆ ಪ್ರಾಣ ತೊರೆದ ಪತ್ನಿ : ಮಕ್ಕಳಿಬ್ಬರು ಅನಾಥ

ಅಳುತ್ತಲೇ ಪತಿಯ ಮೃತದೇಹದ ಮುಂದೆ ಪ್ರಾಣ ತೊರೆದ ಪತ್ನಿ : ಮಕ್ಕಳಿಬ್ಬರು ಅನಾಥ


ಹಾಸನ: ಅಳುತ್ತಲೇ ಪತಿಯ ಮೃತದೇಹದ ಮುಂದೆ ಪತ್ನಿಯೂ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆಯೊಂದು ಬೇಲೂರು ತಾಲ್ಲೂಕಿನ ಪಡುವಳಲು ಗ್ರಾಮದಲ್ಲಿ ನಡೆದಿದೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ರವೀಶ್ (39) ಹಾಗೂ ಪ್ರಮೀಳಾ (32) ಮೃತಪಟ್ಟ ದಂಪತಿ. ಮೇ 5ರಂದು ರಾತ್ರಿ ರವೀಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೇ 6ರಂದು ಬೆಳಗ್ಗೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಪತಿಯ ಮೃತದೇಹದ ಮುಂದೆ ಅಳುತ್ತಲೇ ಪತ್ನಿ ಪ್ರಮೀಳಾ ಅವರೂ ಕೊನೆಯುಸಿರೆಳೆದಿದ್ದಾಳೆ.

ಒಂದೆಡೆ ದಂಪತಿ ಸಾವಿನಲ್ಲೂ ಒಂದಾದರೆ, ಇನ್ನೊಂದೆಡೆ ದಂಪತಿಯ ಇಬ್ಬರು ಗಂಡು ಪುತ್ರರು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಾಲಕರ ಮೃತದೇಹಗಳ ಮುಂದೆ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ. ದಂಪತಿಯ ಸಾವಿಗೆ ಗ್ರಾಮಸ್ಥರೂ ಕೂಡ ಕಂಬನಿ ಮಿಡಿದಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article