-->
ಟ್ರಾಲಿ ಬ್ಯಾಗ್ ನಲ್ಲಿ ತುಂಡರಿಸಿದ ರೀತಿಯಲ್ಲಿ ಹೊಟೇಲ್ ಮಾಲಕನ ಮೃತದೇಹ ಪತ್ತೆ

ಟ್ರಾಲಿ ಬ್ಯಾಗ್ ನಲ್ಲಿ ತುಂಡರಿಸಿದ ರೀತಿಯಲ್ಲಿ ಹೊಟೇಲ್ ಮಾಲಕನ ಮೃತದೇಹ ಪತ್ತೆ


ಕೇರಳ: ಹೊಟೇಲ್ ಮಾಲಕರೊಬ್ಬರನ್ನು ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ಟ್ರಾಲಿ ಬ್ಯಾಗ್‌ನಲ್ಲಿಟ್ಟು ಎಸೆದ ಭಯಾನಕ ಘಟನೆಯೊಂದು ಕೇರಳ ರಾಜ್ಯದಲ್ಲಿ ನಡೆದಿದೆ. ಈ ಬ್ಯಾಗ್ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಘಾಟ್ ರಸ್ತೆ ಬಳಿ ದೊರೆತಿದೆ‌.

ಮೃತಪಟ್ಟ ವ್ಯಕ್ತಿಯನ್ನು ಸಿದ್ದಿಕ್ ಎಂದು ಗುರುತಿಸಲಾಗಿದ್ದು, ಇವರು ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದರು. ಈ ಕುರಿತು ಅವರ ಪುತ್ರನಿಂದ ಪೊಲೀಸ್ ದೂರು ದಾಖಲಿಸಿದ್ದರು. ಇದೀಗ ಅವರ ಮೃತದೇಹವನ್ನು ಪತ್ತೆಹಚ್ಚಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಮೇ 18 ಮತ್ತು 19ರ ನಡುವೆ ಸಿದ್ದಿಕ್ ಕೊಲೆ ನಡೆದಿದೆ ಎಂದಿ ಶಂಕಿಸಲಾಗಿದೆ. ಕೊಲೆಗೈದ ಬಳಿಕ ಆರೋಪಿಗಳು ಅವರ ಮೃತದೇಹವನ್ನು ಛಿದ್ರಛಿದ್ರ ಮಾಡಿ ಟ್ರಾಲಿ ಬ್ಯಾಗ್ ನಲ್ಲಿಟ್ಟು ಎಸೆದು ತಲೆಮರೆಸಿಕೊಂಡಿದ್ದಾರೆ. ಇದೀಗ ಪೊಲೀಸರು ರೈಲ್ವೆ ರಕ್ಷಣಾ ಪಡೆಯ ಸಹಾಯದಿಂದ ತಮಿಳುನಾಡಿನ ಚೆನ್ನೈನಲ್ಲಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ‌. ಸಿದ್ದಿಕ್ ಅವರ ಮಾಜಿ ಉದ್ಯೋಗಿ ಸೇರಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article