ವಿನು ಬಳಂಜ ನಿದೇ೯ಶನದ “ಬೇರ”ಕನ್ನಡ ಚಲನಚಿತ್ರ ಜೂನ್ ನಲ್ಲಿ ತೆರೆಗೆ
Tuesday, May 23, 2023
ಮ೦ಗಳೂರು: ವಿನು ಬಳಂಜ ನಿದೇ೯ಶನದಲ್ಲಿ ವಿಭಿನ್ನ ಕಥಾವಸ್ತು ಒಳಗೊ೦ಡಿರುವ “ಬೇರ “ಕನ್ನಡ ಚಲನಚಿತ್ರ ಜೂನ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಚಿತ್ರದ ಬಗ್ಗೆ ಮ೦ಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಚಿತ್ರದ ನಿದೇ೯ಶಕ ವಿನು ಬಳಂಜ
ಅವರು ಮಾನವ ಕುಲದ ಒಳಿತಿಗಾಗಿ ಇರುವ ಧಮ೯ ಸ್ವಾಥ೯ ಸಾಧನೆಗಾಗಿ ಬಳಕೆಯಾದಾಗ ಅದರಿಂದ ಆಗುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ ಕಥಾವಸ್ತುವನ್ನು “ಬೇರ” ಚಲನಚಿತ್ರ ಹೊ೦ದಿದೆ. “ಬೇರ” ಎಂದರೆ ವ್ಯಾಪಾರ. ಮೌಲ್ಯಗಳು ವ್ಯಾಪಾರದ ಸರಕು ಆಗಬಾರದು. ವ್ಯಾಪಾರದ ಸರಕು ಆದಾಗ ಮಾನವೀಯತೆ ಮೌನವಾಗುತ್ತದೆ. ಇಂತಹ “ಬೇರ”ಗಳನ್ನು ಮೀರಿ ನಿ೦ತಾಗ ಸುಂದರ ಬದುಕು, ಸಮೃದ್ಧ ಸಮಾಜ ನಿಮಾ೯ಣವಾಗುತ್ತದೆ ಎಂಬುದು ಸಿನಿಮಾದ ತಿರುಳು ಎಂದು ವಿನು ಬಳಂಜ ವಿವರಿಸಿದರು.
ಚಿತ್ರದ ಪ್ರೊಡಕ್ಷನ್ ಹೌಸ್ SLV colours, ಪ್ರೊಡ್ಯೂಸರ್ ದಿವಾಕರ ದಾಸ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಾಮದಾಸ್ ಶೆಟ್ಟಿ ಡಿಒಪಿ ರಾಜಶೇಖರ ರಮಾತ್ನಲ್, ಸಂಗೀತ ಮಣಿಕಾಂತ್ ಕದ್ರಿ, ಎಡಿಟಿಂಗ್ ಶ್ರೀಕಾಂತ್ ಕೋ ಡೈರೆಕ್ಟರ್ ಸುಭಾಷ್ ಅರ್ವ.
ತಾರಾಗಣದಲ್ಲಿ ಸುಮನ್ ತಲ್ವಾರ್ , ಹರ್ಷಿಕಾ ಪೂಣಚ್ಚ, ಹರ್ಷವರ್ಧನ್, ಅರವಿಂದ್ ರಾವ್, ರಾಕೇಶ್ ಮಯ್ಯ ದತ್ತಣ್ಣ
ಅಶ್ವಿನ್ ಹಾಸನ್ ಯಶ್ ಶೆಟ್ಟಿ ಶೈನ್ ಶೆಟ್ಟಿ ಸ್ವರಾಜ್ ಶೆಟ್ಟಿ ದೀಪಕ್ ರೈ ಪಾಣಾಜೆ ,ತಮ್ಮಣ್ಣ ಶೆಟ್ಟಿ ರಾಜಶೇಖರ ಶೆಟ್ಟಿ, ಮಂಜುನಾಥ್ ಹೆಗ್ಡೆ ಎಂ .ಕೆ.ಮಠ , ಚಿತ್ಕಲ ಬಿರಾದಾರ್, ಅಂಜಲಿ, ಶೋಭರಾಣಿ, ಶಾಂತಲಾ ಕಾಮತ್ , ಗುರು ಹೆಗ್ಡೆ ಸಬಿತ ಕಾಮತ್, ಧವಲ್ ಪ್ರಸನ್ನ, ಪ್ರದೀಪ್ ಚಂದ್ರ ಕುತ್ಪಾಡಿ, ಗಿರೀ ಶ್ ಅವರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಷಿಕಾ ಪೂಣಚ್ಚ, ಯಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ಅಶ್ವಿನಿ ಹಾಸನ, ದವಲ್ ದೀಪಕ್, ನಿರ್ಮಾಪಕ ದಿವಾಕರ ದಾಸ ನೇರ್ಲಾಜೆ, ಕಾರ್ಯಕಾರಿ ನಿರ್ಮಾಪಕ ರಾಮ್ ದಾಸ್ ಶೆಟ್ಟಿ, ತಮ್ಮಣ್ಣ ಶೆಟ್ಟಿ, ಬಬಿತಾ ಕಾಮತ್ ಉಪಸ್ಥಿತರಿದ್ದರು.
ಬೇರ ಸಿನಿಮಾ ಜೂನ್ ನಲ್ಲಿ ತೆರೆಕಾಣಲಿದೆ.