ಆವಿಷ್ಕಾರಗಳಿಂದ ಪ್ರಗತಿ: ಆಳ್ವಾಸ್ ಕಾಲೇಜು ವಾರ್ಷಿಕೋತ್ಸವದಲ್ಲಿ ಚಲ್ಲಣ್ಣವರ್

ಆವಿಷ್ಕಾರಗಳಿಂದ ಪ್ರಗತಿ: ಆಳ್ವಾಸ್ ಕಾಲೇಜು ವಾರ್ಷಿಕೋತ್ಸವದಲ್ಲಿ ಚಲ್ಲಣ್ಣವರ್





'ವಿನೂತನ ಆವಿಷ್ಕಾರಗಳು ದೇಶದ ಪ್ರಗತಿಗೆ ಪ್ರೇರಕ ಹಾಗೂ ಪೂರಕ. ವಿದ್ಯಾರ್ಥಿಗಳು ಈ ದಿಶೆಯಲ್ಲಿ ಹೆಜ್ಜೆ ಇಡಬೇಕು' ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ರಾಜುಕೃಷ್ಣ ಚಲ್ಲಣ್ಣವರ್ ಹೇಳಿದರು.



ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ನಡೆದ ಆಳ್ವಾಸ್‌ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.



ಕಲಿಕೆಯಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರೀತಿ ಮತ್ತು ಬದ್ಧತೆಯಿಂದ ಅಧ್ಯಯನ ಮುಂದುವರಿಸಿ ಎಂದು ಅವರು ಕರೆ ನೀಡಿದರು.



ಆಳ್ವಾಸ್ ಕಾಲೇಜು ಮೂಡಬಿದಿರೆಗೆ ಜಾಗತಿಕ ಛಾಪು ನೀಡಿದೆ. ಇದು ಡಾ.ಮೋಹನ ಆಳ್ವ ಅವರ ದೃಷ್ಟಿ ಹಾಗೂ ಶ್ರಮ. ನೀವೂ ನಿಮ್ಮ ಕಲ್ಪನೆಯಂತೆ ಮುನ್ನಡೆಯಿರಿ ಎಂದರು.


ನೀವೆಲ್ಲ ಬೀಜಗಳಂತೆ. ಆಳ್ವಾಸ್‍ನಲ್ಲಿ ಸಿಗುವ ಶೈಕ್ಷಣಿಕ ಪೋಷಣೆಯಿಂದ ಭವಿಷ್ಯದಲ್ಲಿ ಸಮಾಜಕ್ಕೆ ಫಲ ನೀಡಲಿದ್ದಿರಿ ಎಂದು ಹಾರೈಸಿದರು.