1964ರಲ್ಲಿ 7ಸಾವಿರ ರೂ. ಮುಖಬೆಲೆಯಿದ್ದ ರೋಲೆಕ್ಸ್ ವಾಚ್ ಹರಾಜಾದ ಬೆಲೆ ಕೇಳಿದ್ರೆ ದಂಗಾಗ್ತೀರಾ



ಲಂಡನ್: 60 ವರ್ಷಗಳ ಹಿಂದೆ  7,000 ಸಾವಿರ ರೂ.ಗೆ ಖರೀದಿಸಿದ್ದ ರೊಲೆಕ್ಸ್ ವಾಚ್, ಸದ್ಯ ನಡೆದ ಹರಾಜೊಂದರಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
 
1964ರಲ್ಲಿ ಈ ರೊಲೆಕ್ಸ್ ವಾಚ್ ಅನ್ನು  7,000 ರೂ.ಗೆ ಖರೀಸಿದಲಾಗಿತ್ತು. ಆದರೆ ಇತ್ತೀಚಿಗೆ ಯುಕೆಯಲ್ಲಿ ನಡೆದ ಹರಾಜಿನಲ್ಲಿ ಈ ವಾಚ್ 41,11,692 ರೂ.ಗೆ ಮಾರಾಟವಾಗಿದೆ. ಇದು ರೊಲೆಕ್ಸ್ ಸಬ್‌ಮರಿನರ್ ಮಾಡೆಲ್ ವಾಚ್ ಆಗಿದೆ. ದಿ ಡೈವರ್ಸ್ ವಾಚ್ ಎಂದೂ ಇದು ಖ್ಯಾತಿ ಹೊಂದಿದೆ. ಇದನ್ನು 1953ರಲ್ಲಿ ಮೊದಲ ಬಾರಿಗೆ ಲಾಂಚ್ ಮಾಡಲಾಯಿತು. 100 ಮೀಟರ್ (330 ಅಡಿ) ಆಳದ ವಾಟರ್‌ಪ್ರೂಫ್ ವಾಚ್ ಆಗಿತ್ತು. ಪ್ರಸ್ತುತ 300 ಮೀಟರ್ (1,000 ಅಡಿ) ಆಳದವರೆಗೂ ವಾಟರ್‌ಪ್ರೂಫ್ ಸಾಮರ್ಥ್ಯ ಹೊಂದಿದೆ.

ಬಿಬಿಸಿ ಪ್ರಕಾರ ಸಿಮನ್ ಬಾರ್ನೆಟ್ ಎಂಬುವರು ಈ ವಾಚ್ ಅನ್ನು ಮೊದಲು ಖರೀದಿಸಿದ್ದರು. ಡೈವರ್ ಆಗಿದ್ದ ಸಿಮನ್, ರಾಯಲ್ ನೌಕಾಪಡೆಯಲ್ಲಿ ಹೆಲಿಕಾಪ್ಟರ್ ರಕ್ಷಣಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಸಿಮನ್ ಮೃತಪಟ್ಟರು. ಬಳಿಕ ಈ ವಾಚ್ ಅವರ ಮಗ ಪೀಟೆ ಬರ್ನೆಟ್ ಬಳಿಯಿತ್ತು. ಇದೀಗ ಅದನ್ನು ಯುನೈಟೆಡ್ ಕಿಂಗ್‌ಡಮ್‌ ನಾರ್ಫೋಲ್ಡ್ ಕೌಂಟಿಯ ಡಿಸ್ ಪಟ್ಟಣದಲ್ಲಿ ಹರಾಜು ಹಾಕಲಾಯಿತು. ಅಂತಿಮವಾಗಿ ವಾಚ್ 41 ಲಕ ರೂ.ಗೆ ಮಾರಾಟವಾಗಿದೆ.

ನೌಕಾಪಡೆಯಲ್ಲಿ ಸೇವೆ ಸಲ್ಲಿಸುವಾಗ ರಕ್ಷಣಾ ಕಾರ್ಯನಿಮಿತ್ತ ನೀರಿಗೆ ಧುಮುಕಲು ಈ ವಾಚ್ ಅನ್ನು ನನ್ನ ತಂದೆ ಬಳಸುತ್ತಿದ್ದರು ಎಂದು ಮಗ ಪೀಟೆ ಬರ್ನೆಟ್ ಹೇಳಿದ್ದಾರೆ. ತಾನು ಎಷ್ಟು ಸಮಯದವರೆಗೆ ನೀರಿನಡಿಯಲ್ಲಿ ಇದ್ದೇನೆ ಎಂದು ತಿಳಿದುಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಈ ವಾಚ್ ಏಕೈಕ ಸಾಧನವಾಗಿತ್ತು. ಆ ದಿನಗಳಲ್ಲಿ ರೋಲೆಕ್ಸ್ ಒಂದು ಜಲಾಂತರ್ಗಾಮಿ ಸಾಧನವಾಗಿತ್ತು. ಆದರೆ ಈಗ ಅದೊಂದು ಫ್ಯಾಷನ್ ಪರಿಕರವಾಗಿದೆ ಎಂದು ಪೀಟೆ ಬರ್ನೆಟ್ ತಿಳಿಸಿದ್ದಾರೆ.