ಗಣೇಶನ ಪೂಜೆ:
ಬುಧವಾರದಂದು ಗಣೇಶನ ಪೂಜೆಗೆ ವಿಶೇಷ ಮಹತ್ವವಿದ್ದು, ಬುಧವಾರದಂದು ಗಣೇಶನ ಪೂಜೆಯಲ್ಲಿ ಋಣಹರ್ತ ಗಣೇಶ ಸ್ತೋತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂಕಷ್ಟಗಳೆಲ್ಲಾ ದೂರವಾಗಿ ಸುಖ-ಸಂತೋಷ, ನೆಮ್ಮದಿನ ಜೀವನ ನಿಮ್ಮದಾಗುತ್ತದೆ.
ದರ್ಬೆಯನ್ನು ಅರ್ಪಿಸಿ:
ಗಣೇಶನಿಗೆ ದರ್ಬೆಯೆಂದರೆ ಬಲು ಪ್ರಿಯ. ಹಾಗಾಗಿ, ಗಣೇಶನ ಪೂಜೆಯಲ್ಲಿ ದರ್ಬೆಯನ್ನು ತಪ್ಪದೇ ಅರ್ಪಿಸಿ. ಬುಧವಾರದಂದು ಗಣೇಶನ ಪೂಜೆಯಲ್ಲಿ 21 ದರ್ಬೆಯ 21  ಗಂಟುಗಳನ್ನು ಅರ್ಪಿಸುವುದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ. 
ಹಸುವಿಗೆ ಪೂಜೆ ಮಾಡಿ ಆಹಾರ ಅರ್ಪಿಸಿ: 
ಹಿಂದೂ ಧರ್ಮದಲ್ಲಿ ಹಸುವಿನಲ್ಲಿ 33 ಕೋಟಿ ದೇವ ದೇವತೆಗಳು ನೆಲಸಿದ್ದಾರೆ ಎಂಬ ನಂಬಿಕೆ ಇದ್ದು, ಬುಧವಾರದಂದು ಹಸುವಿಗೆ ಪೂಜೆ ಮಾಡಿ ಹಸಿರು ಆಹಾರಗಳನ್ನು ತಿನ್ನಿಸುವುದರಿಂದ ಗ್ರಹ ದೋಷಗಳಿಂದ ಮುಕ್ತಿ ದೊರೆಯುತ್ತದೆ. 
 
 
 
 
 
 
 
 
 
 
 
 
 
 
 
 
 
 
