-->
1000938341
ಮದುವೆಯಾಗುವ ಆಮಿಷವೊಡ್ಡಿ ಶಾಲಾ ಬಾಲಕಿ ಅತ್ಯಾಚಾರ: ಪ್ರಿಯಕರ, ಇಬ್ಬರು ಯುವತಿಯರು ಸೇರಿದಂತೆ ಐವರು ಅರೆಸ್ಟ್

ಮದುವೆಯಾಗುವ ಆಮಿಷವೊಡ್ಡಿ ಶಾಲಾ ಬಾಲಕಿ ಅತ್ಯಾಚಾರ: ಪ್ರಿಯಕರ, ಇಬ್ಬರು ಯುವತಿಯರು ಸೇರಿದಂತೆ ಐವರು ಅರೆಸ್ಟ್


ಪರಸ್ಸಾಲ: ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪರಿಚಿತಳಾದ ಶಾಲಾ ಬಾಲಕಿಯ ಮೇಲೆ ವಿವಾಹವಾಗುವೆಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಐವರನ್ನು ಪರಸ್ಸಾಲ ಪೊಲೀಸರು ಬಂಧಿಸಿದ್ದಾರೆ.

ಎರ್ನಾಕುಲಂ ಕಾಲಡಿ ನಿವಾಸಿಗಳಾದ ಅಜಿನ್ ಸ್ಯಾಮ್, ಅಖಿಲೇಶ್ ಸಾಬು, ಜಿತಿನ್ ವರ್ಗೀಸ್, ಪೂರ್ಣಿಮಾ ದಿನೇಶ್ ಮತ್ತು ಶ್ರುತಿ ಸಿದ್ದಾರ್ಥ್ ಬಂಧಿತ ಆರೋಪಿಗಳು.

ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾದ ಶಾಲಾ ಬಾಲಕಿಯ ಪ್ರಿಯಕರ ಹಾಗೂ ಆತನ ತಂಎ ಎಪ್ರಿಲ್ 17 ರಂದು ರಾತ್ರಿ ಕಲಿಯಕ್ಕವಿಲೈಗೆ ತೆರಳಿದೆ. ಅಲ್ಲಿಂದ ಸಂತ್ರಸ್ತ ಬಾಲಕಿಯನ್ನು ನೆಯ್ಯಂಟಿನ್‌ರದಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದೆ. ತಂಡದಲ್ಲಿ ಇಬ್ಬರು ಯುವತಿಯರು ಇದ್ದರು. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಮರುದಿನ ಆಕೆಯನ್ನು ಕಲಿಯಕ್ಕವಿಲೈಗೆ ಮರಳಿ ತಂದು ಬಿಟ್ಟಿದ್ದಾರೆ. ಬಳಿಕ ಹುಡುಗಿ ಪಾಲಕರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪಾಲಕರು ನೀಡಿದ ದೂರಿನನ್ವಯ ಸಂತ್ರಸ್ತೆಯ ಪ್ರಿಯಕರ ಮತ್ತು ಆತನ ನಾಲ್ವರು ಸ್ನೇಹಿತರನ್ನು ಕಾಲಡಿಯಲ್ಲಿ ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article