ಮಂಗಳೂರು: ವಿಶೇಷಚೇತನೆ ಮಹಿಳೆಯನ್ನೇ ಅತ್ಯಾಚಾರಗೈದ ವೃದ್ಧ ಕಾಮುಕ - ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿ



ಮಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ ವಿಶೇಷ ಚೇತನೆ ಮಹಿಳೆಯನ್ನು ಕಾಮುಕ ವೃದ್ಧನೋರ್ವನು ಅತ್ಯಾಚಾರಗೈದ ಆತಂಕಕಾರಿ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂರಿಂಜೆ ನಿವಾಸಿ ರಾಜಾ ಭಟ್(65) ಅತ್ಯಾಚಾರಗೈದ ಕಾಮುಕ ವೃದ್ಧ.

ಈ ವಿಶೇಷ ಚೇತನೆ ಮಹಿಳೆ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಹಿಳೆಯ ಸೋದರ ಹಾಗೂ ಅವರ ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದರು. ಈ ಸಂದರ್ಭ ರಾಜಾ ಭಟ್ ಮನೆಗೆ ಬಂದಿದ್ದು ಪುಸಲಾಯಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ನೆರೆಮನೆಯವರಿಂದ ವಿಚಾರ ತಿಳಿದು ಮಹಿಳೆಯ ಸಹಖದರ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಪ್ರಕರಣವನ್ನು ಮಹಿಳಾ ಠಾಣೆಯಲ್ಲಿ ದಾಖಲಿಸಲಾಗಿದೆ.

ಆರೋಪಿ ರಾಜಾ ಭಟ್ ಮನೆಮಂದಿಯನ್ನು ತೊರೆದು ಬಾಡಿಗೆ ಮನೆಯಲ್ಲಿ ಓರ್ವನೇ ನೆಲೆಸಿದ್ದಾನೆ. ಹಗಲಿನ ಹೊತ್ತು ವಿಶೇಷ ಚೇತನೆ ಮಹಿಳೆ ಮಾತ್ರ ಮನೆಯಲ್ಲಿ ಇರುತ್ತಿದ್ದರು. ಈ ವಿಚಾರದ ಬಗ್ಗೆ ಮಾಹಿತಿಯಿದ್ದ ರಾಜಾ ಭಟ್ ಮಹಿಳೆ ಒಬ್ಬಂಟಿಯಾಗಿದ್ದ ವೇಳೆ ಬಂದು ಅತ್ಯಾಚಾರ ನಡೆಸಿದ್ದಾನೆ ಎಂದು ದೂರಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಾಜಾ ಭಟ್ ಪರಾರಿಯಾಗಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. 

 
BREAKING NEWS
Loading latest news...
Join our WhatsApp Channel Powered By : Online Pudu