-->
Puttur: Puthila Vs BJP- ಪುತ್ತಿಲ ಪರ ಹೆಚ್ಚುತ್ತಿರುವ ಬೆಂಬಲ: ಬಿಜೆಪಿ, ಪರಿವಾರದಲ್ಲಿ ನಡುಕ!

Puttur: Puthila Vs BJP- ಪುತ್ತಿಲ ಪರ ಹೆಚ್ಚುತ್ತಿರುವ ಬೆಂಬಲ: ಬಿಜೆಪಿ, ಪರಿವಾರದಲ್ಲಿ ನಡುಕ!

ಪುತ್ತಿಲ ಪರ ಹೆಚ್ಚುತ್ತಿರುವ ಬೆಂಬಲ: ಬಿಜೆಪಿ, ಪರಿವಾರದಲ್ಲಿ ನಡುಕ!

ಸಂಘ ಪರಿವಾರದ ನೀಲಿ ಕಣ್ಣಿನ ಹುಡುಗ ಅರುಣ ಕುಮಾರ್ ಪುತ್ತಿಲ ಈಗ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಹಿಂದುತ್ವದ ಭದ್ರಕೋಟೆಯಲ್ಲಿ ಹಿಂದುತ್ವದ ಅಬ್ಬರದಲ್ಲೇ ಗೆದ್ದೇ ಬಿಡುವ ಹಂಬಲ, ಉತ್ಸಾಹ ಪುತ್ತಿಲ ಅವರದ್ದು.ನಿರಾಯಾಸವಾಗಿ ಗೆದ್ದೇ ಗೆಲ್ಲುವ ಈ ಕ್ಷೇತ್ರದಲ್ಲಿ ಪುತ್ತಿಲ ಅವರ ಜನಬೆಂಬಲದಿಂದ ಬಿಜೆಪಿ ಪಾಳಯ ಅಕ್ಷರಶಃ ಕಂಗೆಟ್ಟಿ ಹೋಗಿದೆ.ಅಷ್ಟಕ್ಕೂ ಪುತ್ತಿಲ ಹೋರಾಟ ಮಾಡುತ್ತಿರುವುದು ನಾಯಕರ ಅಹಂಕಾರಕ್ಕೆ ಎದುರಾಗಿ. ಹಮ್ಮು-ಬಿಮ್ಮು, ದರ್ಪದ ನಾಯಕರ ಅಹಂಕಾರಕ್ಕೆ ಪ್ರತಿಕಾರವಾಗಿ. ಹಿಂದುತ್ವವೇ ಶ್ರೀರಕ್ಷೆ, ಗೆದ್ದರೆ ಬಿಜೆಪಿ ಎಂದು ಆರಂಭದಲ್ಲೇ ಘೋಷಿಸಿರುವ ಪುತ್ತಿಲ ಅವರ ಮಾತಿನ ವರಸೆ, ಖಡಕ್ ನುಡಿಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.ಬ್ರಾಹ್ಮಣರ ಅತಿ ದೊಡ್ಡ ಮತ ಪಾಳಯದಲ್ಲಿ ಅರುಣ್ ಪುತ್ತಿಲ ಎಂಬ ಯುವ ನಾಯಕ ಸೂರ್ಯನಂತೆ ಬೆಳಗುತ್ತಿದ್ದಾನೆ. ಈ ಯುವಕನನ್ನು ಕಟ್ಟಿ ಹಾಕಲು ಸ್ವತಃ ಯಡಿಯೂರಪ್ಪ ಅವರೇ ವಿಫಲರಾಗಿದ್ದಾರೆ. ಸಂಘ ಪರಿವಾರದ ಆದಿಯಾಗಿ ಎಲ್ಲರೂ ಶತಾಯ ಗತಾಯ ಪ್ರಯತ್ನ ನಡೆಸಿದರೂ ಸ್ಪರ್ಧೆ ಎಂಬ ಅಚಲ ನಿರ್ಧಾರದಿಂದ ಪುತ್ತಿಲ ಬೆಂಬಲಿಗರು ಒಂದಿಂಚೂ ಹಿಂದೆ ಸರಿಯಲಿಲ್ಲ.ಪ್ರಖರ ಹಿಂದುತ್ವ ನಾಯಕ ಜಗದೀಶ್ ಕಾರಂತ್‌ರಿಂದ ಹಿಡಿದ ಅತಿರಥ ಮಹಾರಥ ನಾಯಕರನ್ನು ಪುತ್ತಿಲ ವಿರುದ್ಧ ಬಳಸಿಕೊಂಡ ಬಿಜೆಪಿ ಅಂತಿಮವಾಗಿ ತನ್ನ ಕೊನೆಯ ಅಸ್ತ್ರವಾಗಿ ಬಿಜೆಪಿ ನಾಯಕ ಡಾ. ಪ್ರಸಾದ್‌ ಭಂಡಾರಿ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನೂ ಅಖಾಡಕ್ಕೆ ಇಳಿಸಿದೆ.ಆದರೆ, ಪುತ್ತಿಲ ಅವರಿದ್ದ ಜನಬೆಂಬಲವನ್ನು ಕಡಿಮೆ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ಪುತ್ತಿಲ ಅವರ ಪರ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಯುತ್ತಿದೆ. ರಾಷ್ಟ್ರೀಯವಾದಿ ನಾಯಕನಿಗೆ ಕ್ಷೇತ್ರದಲ್ಲಿ ಜಾತಿ-ಮತ ಭೇದ ಮರೆತು ಜನರು ವ್ಯಾಪಕವಾಗಿ ಬೆಂಬಲ ನೀಡಿದ್ದಾರೆ.ಹುಬ್ಬಳ್ಳಿಯ ಜಗದೀಶ್ ಶೆಟ್ಟರ್‌ ಅವರಿಗಿಂತಲೂ ಪುತ್ತಿಲ ವಿರುದ್ಧ ಒಂದು ಹಿಡಿ ಹೆಚ್ಚಿನ ವಿರೋಧ ಕಂಡುಬರುತ್ತಿರುವುದು ಬಿಜೆಪಿ, ಪರಿವಾರದಲ್ಲಿ ಇರುವ ನಡುಕ ಎಷ್ಟು ಗಾಢವಾಗಿದೆ ಎಂಬುದನ್ನು ತೋರಿಸುತ್ತಿದೆ.

,

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article