ಎಣ್ಣೆ ಹೊಡೆಯಲು ಕಾಸು ಕೊಡದ ತಂದೆಯನ್ನೇ ಹೊಡೆದು ಕೊಂದ ಪಾಪಿ ಪುತ್ರ


ಬೆಂಗಳೂರು: ಮದ್ಯವ್ಯಸನಿ ಪುತ್ರನೋರ್ವನು ಎಣ್ಣೆ ಹೊಡೆಯಲು ಕಾಸು ಕೊಡದಿರುವುದಕ್ಕೆ ತ‌ಂದೆಯನ್ನೇ  ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಸವರಾಜು(60) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತರ ಪುತ್ರ ನೀಲಾಧರ ಹತ್ಯೆ ಆರೋಪಿ.

ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇನಹಳ್ಳಿ ಪಿಎಸ್ ಲೇಔಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಸವರಾಜು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರೆ ಪುತ್ರ ನೀಲಾಧರ ಆಟೋ ರಿಕ್ಷಾ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ.

ನೀಲಾಧರನು ತಾವು ವಾಸವಾಗಿದ್ದ ಶೆಡ್‌ನೊಳಗಡೆಯೇ ಇಟ್ಟಿಗೆಯಿಂದ ತನ್ನ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕೊಲೆ ನಡೆದು 15 ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಬಸವರಾಜು ಮೃತದೇಹ ಪತ್ತೆಯಾಗಿದಡ. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಪುತ್ರನಿಂದಲೇ ಕೊಲೆಯಾಗಿರೋದು ಪತ್ತೆಯಾಗಿದೆ. ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂದು ತಂದೆಯನ್ನೇ ಪುತ್ರ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.