ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಅನ್ಯಮತೀಯ ಯುವಕರೊಂದಿಗೆ ಲವ್ವಿಡವ್ವಿ : ಹೆತ್ತವರಿಂದಲೇ ಹೆಣ್ಣು ಮಕ್ಕಳಿಬ್ಬರ ಹತ್ಯೆ , ತಂದೆ ಪರಾರಿ



ಪಾಟ್ನಾ: ಅನ್ಯಮತೀಯ ಯುವಕರನ್ನು ಪ್ರೀತಿಸುತ್ತಿದ್ದಾರೆಂದು ಹೆತ್ತವರೇ ತಮ್ಮ ಹೆಣ್ಣುಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಹತ್ಯೆಗೈದಿರುವ ಆಘಾತಕಾರಿ ಘಟನೆಯೊಂದು ಬಿಹಾರದ ಹಾಜಿಪುರದಲ್ಲಿ ನಡೆದಿದೆ. 

ಬಿಎ ವ್ಯಾಸಂಗ ಮಾಡುತ್ತಿದ್ದ ರೋಶಿನಿ ಕುಮಾರಿ(18), ಈ ವರ್ಷವಷ್ಟೇ ಎಸ್ಎಸ್ಎಲ್‌ಸಿ ಪರೀಕ್ಷೆ ಪಾಸ್ ಆಗಿರುವ ತನುಕುಮಾರಿ (16) ಹತ್ಯೆಯಾದ ದುರ್ದೈವಿ ಬಾಲಕಿಯರು. ನರೇಶ್ ಬೈಟಾ ಹಾಗೂ ರಿಂಕು ದೇವಿ ಈ ಹೆಣ್ಣುಮಕ್ಕಳಿಬ್ಬರನ್ನು ಹತ್ಯೆ ಮಾಡಿದ ಹೆತ್ತವರು ಎನ್ನಲಾಗಿದೆ.

ತಮ್ಮ ಹೆಣ್ಣು ಮಕ್ಕಳಿಬ್ಬರು ಅನ್ಯಜಾತಿಯ ಯುವಕರನ್ನು ಪ್ರೀತಿಸುತ್ತಿದ್ದರು ಎಂದು ಕೋಪಗೊಂಡು ಮಲಗಿದ್ದ ವೇಳೆ ಅವರು ನಿದ್ರೆಗೆ ಜಾರಿದಾಗ ಮಕ್ಕಳನ್ನು ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದಾಗ ಮಕ್ಕಳಿಬ್ಬರ ಹೆಣದ ಮುಂದೆ ತಾಯಿ ರಿಂಕುದೇವಿ ಕುಳಿತಿರುವುದು ಕಂಡು ಬಂದಿದೆ. ಮಕ್ಕಳನ್ನು ತಾವೇ ಹತ್ಯೆ ಮಾಡಿದ್ದಾಗಿ ತಾಯಿ ಪೊಲೀಸರಲ್ಲಿ ತನ್ನೊಪ್ಪಿಕೊಂಡಿದ್ದಾಳೆ. ಘಟನೆಯ ಬಳಿಕ ಮಕ್ಕಳ ತಂದೆ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಿಂಕುದೇವಿಯನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಆರೋಪಿ ನರೇಶ್ ಬೈಟಾಗಾಗಿ ಶೋಧ ನಡೆಸುತ್ತಿದ್ದಾರೆ.

ಪೊಲೀಸರು ಮಕ್ಕಳ ತಾಯಿ ರಿಂಕು ದೇವಿ ಬಳಿ ಘಟನೆ ಬಗ್ಗೆ ವಿಚಾರಿಸಿದ ವೇಳೆ ಆಕೆ ತಮ್ಮ ಹೆಣ್ಣು ಮಕ್ಕಳಿಬ್ಬರು ಬೇರೆ ಧರ್ಮದ ಯುವಕರನ್ನು ಪ್ರೀತಿಸುತ್ತಿದ್ದಾರೆ. ಆಗಾಗ ನಮಗೆ ತಿಳಿಸದೇ ಮನೆಬಿಟ್ಟು ಹೋಗುತ್ತಿದ್ದಾರೆ. ಪರಿಣಾಮ ನೆರೆಹೊರೆಯಲ್ಲಿ ತಮ್ಮ ಮಾನ ಹರಾಜಾಗಿತ್ತು. ಆದ್ದರಿಂದ ಮಾನಕ್ಕೆ ಅಂಜಿ ಮಕ್ಕಳನ್ನು ಹತ್ಯೆ ಮಾಡಿದ್ದಾಗಿ ರಿಂಕುದೇವಿ ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ವೇಳೆ ಈ ಕೊಲೆ ಪ್ರಕರಣದಲ್ಲಿ ಇಬ್ಬರೂ ಪೋಷಕರು ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಬಾಲಕಿಯರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರದ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.