-->
ಬೆದರಿಕೆ ಪತ್ರಕ್ಕೆ 'ಕಿಚ್ಚ' ಸುದೀಪ್ ನೀಡಿದ ಸ್ಪಷ್ಟನೆಯೇನು?

ಬೆದರಿಕೆ ಪತ್ರಕ್ಕೆ 'ಕಿಚ್ಚ' ಸುದೀಪ್ ನೀಡಿದ ಸ್ಪಷ್ಟನೆಯೇನು?


ಬೆಂಗಳೂರು: ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವ ಎಂಬ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ವೇಳೆ ಅವರಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಇದು ರಾಜಕೀಯದವರು ಮಾಡಿರುವುದಲ್ಲ. ಖಂಡಿತಾ ಇದನ್ನು ಚಿತ್ರರಂಗದವರೇ ಮಾಡಿಸಿದ್ದಾರೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಈ ಮೊದಲೂ ಈಮೇಲ್ ಬರುತ್ತಿತ್ತು. ಈಗ ಪೋಸ್ಟ್ ಮಾಡಿದ್ದಾರೆ. ಇದನ್ನು ಯಾತು ಮಾಡುತ್ತಿದ್ದಾರೆಂದೂ ಗೊತ್ತಿದ್ದರೂ ಈಗ ಸುಮ್ಮನಿರುತ್ತೇನೆ. ಅದಕ್ಕೆ ಹೇಗೆ ಉತ್ತರ ನೀಡಬೇಕೆಂದು ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು ಹೇಳಿದರು.

ಈ ಹಿಂದೆಲ್ಲ ಯಾವ ಪಕ್ಷದವರು ಕರೆದರೂ ನಾನು ಹೋಗಿ ಪ್ರಚಾರ ಮಾಡಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ನೇರವಾಗಿ ಬೆಂಬಲ ನೀಡುತ್ತಿದ್ದೇನೆ ಎಂದರ್ಥವಲ್ಲ ಎನ್ನುವ ಮೂಲಕ ರಾಜಕೀಯ ಪ್ರವೇಶವನ್ನು ಅವರು ತಳ್ಳಿ ಹಾಕಿದರು. ಕೆಲವೊಂದು ವಿಚಾರವನ್ನು ನಾನು ಇಲ್ಲಿ ಮಾತನಾಡಲು ಆಗಲ್ಲ. ನಾನೋರ್ವ ಕಲಾವಿದ. ಹೀಗಾಗಿ ಟಿಕೆಟ್ ಕೊಡುತ್ತೇವೆ ಎಂದು ನನಗೆ ಕೇಳುವುದರಲ್ಲಿ ತಪ್ಪೇನಿಲ್ವಲ್ಲಾ? ನಾನು ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಿಲ್ಲ. ನನ್ನ ಪರ ಯಾರು ನಿಂತಿದ್ದಾರೆ ಅವರ ಪರ ನಾನು ನಿಲ್ಲುತ್ತಿದ್ದೇನೆ ಎಂದು ನಟ ಸುದೀಪ್‌ ಹೇಳಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article