ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಇನಾಯತ್ ಆಲಿ ( INAYATH ALI) ಗೆ?


ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಇನಾಯತ್ ಆಲಿಗೆ ಅಂತಿಮವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಮಾಜಿ ಶಾಸಕ ಮೊಯ್ದಿನ್ ಬಾವ‌ ಮತ್ತು ಇನಾಯತ್ ಆಲಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಮಂಗಳೂರು ಉತ್ತರದಲ್ಲಿ ಕೈ ಟಿಕೆಟ್ ಗಾಗಿ  ಹಲವು ಆಕಾಂಕ್ಷಿಗಳಿದ್ದರೂ ಇನಾಯತ್ ಆಲಿ ಮತ್ತು ಮೊಯ್ದಿನ್ ಬಾವ ನಡುವೆ ಪ್ರಬಲ ಪೈಪೋಟಿ ಇತ್ತು. 

ಮಾಜಿ ಶಾಸಕರಾಗಿರುವ ಮೊಯ್ದಿನ್‌ ಬಾವ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಮೊಯ್ದಿನ್ ಬಾವ ಅವರಿಗೆ ಟಿಕೆಟ್ ಖಾತ್ರಿ ಎಂಬುದು ಈವರೆಗೆ ಕೇಳಿ ಬರುತ್ತಿತ್ತು. ಉದ್ಯಮಿ ಇನಾಯತ್ ಆಲಿ ಡಿ ಕೆ ಶಿವಕುಮಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಡಿ ಕೆ ಶಿ ಆಪ್ತರಾಗಿರುವ ಇನಾಯತ್ ಆಲಿ ಅವರ  ಸೂಚನೆಯಂತೆಯೆ ಆಕಾಂಕ್ಷಿಯಾಗಿದ್ದರು. ಇದೀಗ ಇನಾಯತ್ ಆಲಿಗೆ ಟಿಕೆಟ್ ನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ.