ಬೆಳ್ಳಂಬೆಳಗ್ಗೆ ಆನೆ ದಾಳಿಗೆ ಪುತ್ರಿ ಬಲಿ, ತಾಯಿಗೆ ಗಂಭೀರ ಗಾಯ



ದಾವಣಗೆರೆ: ಅರಣ್ಯ ನಾಶವಾಗುತ್ತಿದ್ದಂತೆ ಆನೆ ಹಾಗೂ ಮನುಷ್ಯರ ನಡುವಿನ ಸಂಘರ್ಷ ಅಲ್ಲಲ್ಲಿ ಕಂಡು ಬರುತ್ತಿದ್ದೆ. ಇತ್ತೀಚೆಗೆ ಆನೆ ದಾಳಿಗೆ ದ.ಕ.ಜಿಲ್ಲೆಯಲ್ಲಿ ಬಲಿಯಾಗಿದ್ದರು. ಇಂದು ಬೆಳ್ಳಂಬೆಳಗ್ಗೆ ಆನೆ ದಾಳಿಗೆ ತಾಯಿ ಹಾಗೂ ಮಗಳು ತುತ್ತಾಗಿ ಪುತ್ರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯ ಸೋಮಳಾಪುರ ಗ್ರಾಮದಲ್ಲಿ ನಡೆದಿದೆ.

ಸೋಮಳಾಪುರ ಗ್ರಾಮದ ನಿವಾಸಿ ಕವನ (17) ಮೃತಪಟ್ಟ ದುರ್ದೈವಿ. ಆಕೆಯ ತಾಯಿ ಮಂಜುಳಾ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. 

ತಾಯಿ ಮಗಳು ತಮ್ಮ ಜಮೀನಿನಲ್ಲಿ ಅವರೆಕಾಯಿ ಬಿಡಿಸಲು ಹೋದಾಗ ಆನೆ ದಾಳಿ ಮಾಡಿದೆ. ಹಿಂಭಾಗದಿಂದ ಏಕಾಏಕಿ ಬಂದ ಆನೆ ದಾಳಿ ನಡೆಸಿ ಇಬ್ಬರನ್ನೂ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಘಟನೆಯಲ್ಲಿ ಕವನಾ ಗಂಭೀರವಾಗಿ ಗಾಯಗೊಂಡರು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಮಂಜುಳಾಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಅನೆ ಕಾಣಿಸಿಕೊಂಡ ಹಿನ್ನಲೆ ಜನರು ಭಯಭೀತರಾಗಿದ್ದಾರೆ. ಯಾರು ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಆನೆಯನ್ನು ಕಾಡಿಗಟ್ಟುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu