ತಂದೆಯ ಪ್ರಾಣವನ್ನೇ ಕಸಿದ ಮಾನಸಿಕ ಅಸ್ವಸ್ಥ ಪುತ್ರ



ಉತ್ತರಕನ್ನಡ: ಮಾನಸಿಕ ಅಸ್ವಸ್ಥನೋರ್ವನು ತನ್ನ ಹೆತ್ತ ತಂದೆಯನ್ನೇ ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣವೊಂದು ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿ ಗ್ರಾಮದಲ್ಲಿ ಕೊಲೆ ನಡೆದಿದೆ. 

ತೊಪ್ಪಲಕೇರಿ ಗ್ರಾಮದ ನಿವಾಸಿ ಪಾಂಡುರಂಗ ಮೇಸ್ತ (62) ಕೊಲೆಯಾದ ದುರ್ದೈವಿ. ಅವರ ಪುತ್ರ ಮಾನಸಿಕ ಅಸ್ವಸ್ಥ ಭರತ್ ಮೇಸ್ತ (26) ಕೊಲೆಯಾದ ಆರೋಪಿ. 

ಭರತ್ ಮೇಸ್ತ ಮಾನಸಿಕ ಅಸ್ವಸ್ಥನಾಗಿದ್ದ ಕೆಲವು ದಿನಗಳಿಂದ ಮಾತ್ರೆ ಸೇವಿಸಲು ಹಠ ಮಾಡುತ್ತಿದ್ದ. ಇದೇ ಕಾರಣದಿಂದ ತಂದೆ-ಮಗನ ನಡುವೆ ನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ. ಆದ್ದರಿಂದ ತಂದೆ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಾಕುವಿನಿಂದ ಇರಿದಿದ್ದಲ್ಲದೆ, ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹೊನ್ನಾವರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.