-->
ಸೊಳ್ಳೆ ಬಾಧೆ ತಪ್ಪಿಸಲು ಹಚ್ಚಿದ್ದ ಕಾಯಿಲ್ ಪ್ರಾಣಕ್ಕೇ ಕಂಟಕವಾಯ್ತು: ಹಸುಗೂಸು ಸೇರಿ ಆರು ಮಂದಿ ಬಲಿ

ಸೊಳ್ಳೆ ಬಾಧೆ ತಪ್ಪಿಸಲು ಹಚ್ಚಿದ್ದ ಕಾಯಿಲ್ ಪ್ರಾಣಕ್ಕೇ ಕಂಟಕವಾಯ್ತು: ಹಸುಗೂಸು ಸೇರಿ ಆರು ಮಂದಿ ಬಲಿ


ನವದೆಹಲಿ: ಸೊಳ್ಳೆ ಬಾಧೆ ತಪ್ಪಿಸಲು ಸೊಳ್ಳೆ ಬತ್ತಿ ಹಚ್ಚಿ ಒಂದೇ ಕೋಣೆಯಲ್ಲಿ ಮಲಗಿದ್ದ ಆರು ಮಂದಿ ಕಾಯಿಲ್ ಬೆಂಕಿ ಹಾಸಿಗೆಗೆ ತಾಗಿರುವ ಪರಿಣಾಮ ಸಂಭವಿಸಿರುವ ದಟ್ಟ ಹೊಗೆಯಿಂದ ಉಸಿರುಗಟ್ಟಿ ಹಸುಗೂಸು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ದುರ್ಘಟನೆಯೊಂದು ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನ ಮಾಚಿ ಮಾರ್ಕೆಟ್‌ನ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ. 

ವಾಲಾಪೊಲೀಸರ ಪ್ರಕಾರ, ರಾತ್ರಿ ವೇಳೆ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಹಚ್ಚಿದ್ದರು. ಆರೂ ಮಂದಿಯೂ ಒಂದೇ ಕೋಣೆಯಲ್ಲಿ ಮಲಗಿದ್ದರು. ಆದರೆ ಸೊಳ್ಳೆ ಬತ್ತಿಯು ಅಕಸ್ಮಾತ್ ಆಗಿ ಹಾಸಿಗೆಯ ಮೇಲೆ ಬಿದ್ದಿದೆ. ಪರಿಣಾಮ ವಿಷಕಾರಿ ಹೊಗೆ ಹಬ್ಬಿ ಮನೆಮಂದಿ ಪ್ರಜ್ಞೆ ಕಳೆದುಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಒಂಬತ್ತು ಜನರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇವರಲ್ಲಿ ನಾಲ್ವರು ಪುರುಷರು, ಮಹಿಳೆ ಹಾಗೂ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article