ಜಬಲ್ಪುರ್: ಹಿಂದೂ ಧರ್ಮ, ಅದರ ತತ್ವಗಳು ಹಾಗೂ ಆಚರಣೆಗಳಿಂದ ಆಕರ್ಷಿತಗೊಂಡಿರುವ ಮುಸ್ಲಿಂ ಯುವಕನೋರ್ವನು ನರ್ಮದಾ ನದಿಯಲ್ಲಿ ತೀರ್ಥ ಸ್ನಾನ ಮಾಡುವ ಮೂಲಕ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾನೆ.
ಮುಸ್ಲಿಂ ಯುವಕನು ಮತಾಂತರಗೊಂಡಿರುವ ಸುದ್ದಿ ಪ್ರಚಾರವಾಗುತ್ತಿದ್ದಂತೆ, ಆತ ಹಿಂದೂ ಧರ್ಮದ ಯುವತಿಯನ್ನು ಮದುವೆಯಾಗಲು ತನ್ನ ಧರ್ಮವನ್ನು ತೊರೆದು ಮತಾಂತರವಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನರ್ಮದಾ ನದಿಯಲ್ಲಿ ಮತಾಂತರ ಕಾರ್ಯ ನಡೆದಿದೆ. ಹಿಂದೂ ಧರ್ಮಸೇನೆಯು ನರ್ಮದಾ ನದಿ ತೀರದಲ್ಲಿ ವೇದ ಮಂತ್ರಗಳನ್ನು ಪಠಿಸುವ ಮೂಲಕ ಮತಾಂತರ ಕಾರ್ಯವನ್ನು ನಡೆಸಿದೆ. ಮತಾಂತರದ ಆಚರಣೆಗಳನ್ನು ಅನುಸರಿಸುವ ಮೂಲಕ ಅಖಿಲ್ ಅನ್ಸಾರಿ ಇದೀಗ ಹರ್ಷ ಆರ್ಯನೆಂದು ಮುಸ್ಲಿಂನಾಗಿದ್ದವ ಹಿಂದೂವಾಗಿ ಬದಲಾಗಿದ್ದಾರೆ.
ಮದುವೆಯಾಗಬೇಕಾದರೆ ತನ್ನ ಧರ್ಮವನ್ನು ಬದಲಾಯಿಸುವಂತೆ ಯುವಕನ ಪ್ರೇಯಸಿ ಷರತ್ತು ಮುಂದಿಟ್ಟಿದ್ದಳು. ಇದು ಮತಾಂತರ ಹಿಂದಿನ ಕಾರಣ ಎಂದು ತಿಳಿದುಬಂದಿದೆ. ಆದರೂ, ಮತಾಂತರಗೊಳ್ಳುವ ವರ್ಷಗಳ ಹಿಂದಿನಿಂದಲೂ ಯುವಕ ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿದ್ದನು ಎಂಬುದನ್ನು ಸಹ ಗಮನಿಸಲಾಗಿದೆ. 
 
   
 
 
 
 
 
 
 
 
 
 
 
 
 
 
 
 
 
 
