ಹೈದರಾಬಾದ್ : ಕರ್ನೂಲಿನ ಆಲೂರು ಬಿಜೆಪಿ ಉಸ್ತುವಾರಿ ಹಾಗೂ ಮಾಜಿ ಶಾಸಕಿ ನೀರಜಾ ರೆಡ್ಡಿ ರವಿವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರು ಹೈದರಾಬಾದ್‌ನಿಂದ ಕರ್ನೂಲ್‌ಗೆ ಬರುತ್ತಿದ್ದ ವೇಳೆ ತೆಲಂಗಾಣದ ಬೀಚುಪಲ್ಲಿ ಎಂಬಲ್ಲಿ ಟೈರ್ ಸ್ಪೋಟಗೊಂಡು ಕಾರು ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.
ನೀರಜಾ ಅವರು 2009 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಗೆದ್ದು ರಾಜ್ಯದಲ್ಲಿ ಪ್ರಸಿದ್ಧ ಮಹಿಳಾ ರಾಜಕಾರಣಿಯಾಗಿದ್ದರು. ಆದರೆ, 2011ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವರು ರಾಜೀನಾಮೆ ನೀಡಿ ರಾಜಕೀಯದಿಂದಲೇ ದೂರವಿದ್ದರು. ಆನಂತರ ಅವರು 2019 ರಲ್ಲಿ YSRCP ಸೇರಿದ್ದರು. ನಂತರ ಬಿಜೆಪಿ ಪಕ್ಷ ಸೇರಿದ್ದರು.