-->
ಆರು ಮಂದಿಯ ಮುದ್ದಿನ ಪತಿಗೆ ಮೊದಲ ಮಗುವನ್ನು ಯಾರೊಂದಿಗೆ ಪಡೆಯುದೇ ಚಿಂತೆ..!

ಆರು ಮಂದಿಯ ಮುದ್ದಿನ ಪತಿಗೆ ಮೊದಲ ಮಗುವನ್ನು ಯಾರೊಂದಿಗೆ ಪಡೆಯುದೇ ಚಿಂತೆ..!


ನವದೆಹಲಿ: ಮದುವೆಯಾದ ಪ್ರತಿಯೊಬ್ಬರು ಮಕ್ಕಳನ್ನು ಬಯಸುವುದು ಸಾಮಾನ್ಯ. ಯಾವಾಗ ಮಗುವನ್ನು ಹೊಂದಬೇಕೆಂಬ ಕನಸು ಅವರಲ್ಲಿ ಇರುತ್ತದೆ‌. ಆದರೆ ಇಲ್ಲೊಬ್ಬ ಆರು ಮಂದಿ ಪತ್ನಿಯರನ್ನು ಹೊಂದಿರುವ ವ್ಯಕ್ತಿಯೊಬ್ಬರು ಪ್ರತಿಯೊಬ್ಬ ಪತ್ನಿಯೊಂದಿಗೂ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ. ಆದರೆ ಅವರು ತಮ್ಮ ಮೊದಲ ಮಗುವನ್ನು ಯಾರೊಂದಿಗೆ ಗರ್ಭಧರಿಸಬೇಕು ಎಂದು ನಿರ್ಧರಿಸಲು ಸಾಧ್ಯವಾಗದೇ ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ.

ಬ್ರೆಜಿಲ್‌ನ ಸಾವೊ ಪಾಲೊ ಮೂಲದ ಆರ್ಥರ್ ಉರ್ಸೊ(37) ಒಟ್ಟು 9 ಮಂದಿ ಪತ್ನಿಯರನ್ನು ಹೊಂದಿದ್ದಾನೆ. ಈ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದಾನೆ. ಇದೀಗ ಆತ ಲುವಾನಾ ಕಝಾಕಿ 27, ಎಮೆಲ್ಲಿ ಸೌಜಾ 21, ವರಿಯಾ ಸ್ಯಾಂಟೋಸ್ 24, ಒಲಿಂಡಾ ಮರಿಯಾ 51, ಡಾಮಿಯಾನಾ 23, ಮತ್ತು ಅಮಂಡಾ ಅಲ್ಬುಕರ್ಕ್ 28 ಸೇರಿದಂತೆ ಆರು ಮಂದಿಯೊಂದಿಗೆ ಸಂಸಾರ ಮಾಡುತ್ತಿದ್ದಾರೆ. ಯಾರೊಂದಿಗೆ ಮೊದಲ ಮಗು ಪಡೆಯುದು ಎಂಬುದೇ ಆರ್ಥರ್ ಉರ್ಸೊ ಚಿಂತೆಯಾಗಿದೆ.


'ನಾನು ನನ್ನ ಎಲ್ಲಾ ಪತ್ನಿಯರೊಂದಿಗೆ ಮಗುವನ್ನು ಹೊಂದಲು ಬಯಸುತ್ತೇನೆ. ಪರಿಣಾಮ ಅವರಲ್ಲಿ ಯಾರಿಗೂ ಅಸಮಾಧಾನ ಉಂಟಾಗುವುದಿಲ್ಲ. ನನ್ನ ಆರು ಪತ್ನಿಯರಲ್ಲಿ ಯಾರನ್ನು ಮೊದಲು ಗರ್ಭಿಣಿಯಾಗಬೇಕೆಂದು ಆಯ್ಕೆ ಮಾಡುವ ಮೂಲಕ ಅಸಮಾಧಾನಗೊಳ್ಳಲು ನಾನು ಬಯಸುವುದಿಲ್ಲ. ಆದ್ದರಿಂದ ನಾವು ಬಾಡಿಗೆ ತಾಯ್ತನವನ್ನು ಆರಿಸಿಕೊಂಡಿದ್ದೇವೆ ಆ ನನ್ನ ಮಗುವಿಗೆ ಇವರೆಲ್ಲ ತಾಯಿ ಆಗಿ ಇರಲಿದ್ದಾರೆ' ಎಂದು ಆರ್ಥರ್ ತಿಳಿಸಿದ್ದಾನೆ.

ಆದ್ದರಿಂದ ಅಂತಿಮವಾಗಿ ಬಾಡಿಗೆ ತಾಯ್ತನದ ಯೋಜನೆ ಮೂಲಕ ಎಲ್ಲರೊಂದಿಗೂ ಮೊದಲ ಮಗು ಪಡೆಯುವ ಪ್ಲ್ಯಾನ್ ರೂಪಿಸಿದ್ದಾನಂತೆ. ಈ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article