-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
8 ವರ್ಷಗಳವರೆಗೆ 'ಭಯ್ಯಾ' ಎಂದವನನ್ನೇ ಮದುವೆಯಾಗಿ ಮಗು ಹೊಂದಿದ್ದೇನೆ ಎಂದು ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿ ಯುವತಿ

8 ವರ್ಷಗಳವರೆಗೆ 'ಭಯ್ಯಾ' ಎಂದವನನ್ನೇ ಮದುವೆಯಾಗಿ ಮಗು ಹೊಂದಿದ್ದೇನೆ ಎಂದು ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಪೋಸ್ಟ್ ಮಾಡಿ ಯುವತಿ


ನವದೆಹಲಿ: ಉತ್ತರ ಭಾರತದಲ್ಲಿ ಹಿರಿಯ ಸಹೋದರ ಸಮಾನ ವ್ಯಕ್ತಿಯನ್ನು ಭಯ್ಯಾ ಎಂದೇ ಸಂಬೋಧಿಸುತ್ತಾರೆ.  ಆದರೆ ಇಲ್ಲೊಬ್ಬ ಯುವತಿ ತಾನು 8 ವರ್ಷಗಳವರೆಗೆ 'ಭಯ್ಯಾ' ಎಂದು ಕರೆಯುತ್ತಿದ್ದ ವ್ಯಕ್ತಿಯನ್ನೇ ಇದೀಗ ವಿವಾಹವಾಗಿ ಮಗುವನ್ನು ಪಡೆದಿರುವ ಬಗ್ಗೆ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಈಕೆಯ ಹೆಸರು ವಿನಿ. ಈಕೆಯ ಪತಿಯ ಹೆಸರು ಜೈ. ಈ ಸುಂದರ ಜೋಡಿಗೀಗ ಹಿರಿಯರೇ ಮುಂದೆ ನಿಂತು ವಿವಾಹ ಮಾಡಿದ್ದಾರೆ. ಇದೀಗ ಇವರ ದಾಂಪತ್ಯದ ಫಲವಾಗಿ ಒಂದು ಮಗುವೂ ಇದೆ. ಈ ಬಗ್ಗೆ ವಿನಿ ತನ್ನ ಕತೆಯನ್ನು ತಾನೇ ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಜಾಲತಾಣದಲ್ಲಿ 5 ಮಿಲಿಯನ್‌ಗೂ ಅಧಿಕ  ವೀಕ್ಷಿಸಿದ್ದಾರೆ‌. ಇದರ ಪರ- ವಿರೋಧ ಚರ್ಚೆಯನ್ನು ಹುಟ್ಟಿಕೊಂಡಿದೆ.


ವೀಡಿಯೋದಲ್ಲಿ ವಿನಿ ಹಾಗೂ ಆಕೆಯ ಪತಿ ಜೈಯ ಹಿಂದಿನ ಫೋಟೋಗಳು ಒಳಗೊಂಡಂತೆ ಅನೇಕ ಫೋಟೋಗಳಿವೆ. 8 ವರ್ಷಗಳವರೆಗೆ ಭಯ್ಯಾ ಎಂದು ಕರೆಯುತ್ತಿದ್ದೆ ಇದೀಗ ಅವರನ್ನೇ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದೇನೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ. ಅಂದಹಾಗೆ ವಿನಿ ಮತ್ತು ಜೈ ಇಬ್ಬರು ಸಂಬಂಧಿಗಳು. ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವಿದ್ದ ಕಾರಣ ವಿನಿ ಸುಮಾರು 8 ವರ್ಷಗಳವರೆಗೆ ಜೈಯನ್ನು ಭಯ್ಯಾ ಎಂದು ಕರೆಯುತ್ತಿದ್ದರಂತೆ. ಸಂಬಂಧಿಕರು ಇಬ್ಬರ ಮದುವೆ ಮಾಡಿಸಿದ ಬಳಿಕ ಇದೀಗ ಗಂಡ-ಹಂಡತಿಯಾಗಿ ಸುಂದರ ಸಂಸಾರ ಸಾಗಿಸುತ್ತಿದ್ದಾರೆ.

ವಿಡಿಯೋದಲ್ಲಿ ದಂಪತಿಯ ಮಗುವಿನ ಚಿತ್ರಗಳು ಸಹ ಇವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲೂ ವಿಶೇಷವಾಗಿ ವಿಡಿಯೋದ ಶೀರ್ಷಿಕೆಗಾಗಿ ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ಕಾಮೆಂಟ್‌ಗಳು ಬಂದಿವೆ. 

Ads on article

Advertise in articles 1

advertising articles 2

Advertise under the article

ಸುರ