ಉತ್ತರಪ್ರದೇಶ: ಯುವತಿಯೊಬ್ಬಳು ತನ್ನ ಪ್ರಿಯಕರನ ತಂದೆಯೊಂದಿಗೆ ಪರಾರಿಯಾಗಿರುವ ವಿಚಿತ್ರ ಪ್ರೇಮ ಪ್ರಕರಣವೊಂದು ಉತ್ತರ ಪ್ರದೇಶದ ಕಾಲ್ಪುರದಲ್ಲಿನಡೆದಿದೆ. ಈ ಜೋಡಿ ಇದೀಗ ಒಂದು ವರ್ಷದ ಬಳಿಕ ಪತ್ತೆಯಾಗಿದೆ.
20 ವರ್ಷದ ಈ ಯುವತಿಗೆ ಅಮಿತ್ ಎಂಬ ಯುವಕನೊಂದಿಗೆ ಪ್ರೀತಿಯಿತ್ತು. ಅದರಂತೆ ಕಳೆದ ವರ್ಷ ಆಕೆ ತನ್ನ ಪ್ರಿಯಕರ ಅಮಿತ್ ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರನ ತಂದೆ ಕಮಲೇಶ್ ನ ಪರಿಚಯವಾಗಿದೆ. ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದಾರೆ. ಬಳಿಕ ಸಲಿಗೆ ಬೆಳೆದು ಯಾರಿಗೂ ಗೊತ್ತಾಗದಂತೆ ಕಳೆದ ವರ್ಷ ಮನೆಯಿಂದ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ.
ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಮನೆಯವರು ಚಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಇದೀಗ ಕಳೆದ ಮಾರ್ಚ್ 20 ರಂದು ಓಡಿ ಹೋಗಿದ್ದ ಜೋಡಿಯನ್ನು ದೆಹಲಿಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ.
ಕಾನ್ಪುರದಿಂದ ಓಡಿ ಬಂದ ಈ ಜೋಡಿ ಸುಮಾರು ಒಂದು ವರ್ಷಗಳಷ್ಟು ಕಾಲ ದೆಹಲಿಯಲ್ಲಿ ವಾಸವಾಗಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಹೇಳಿದ್ದಾರೆ.